ಮಂಗಳೂರು ಭಾರೀ ಮಳೆ : ಏರ್​ಪೋರ್ಟ್​ ರನ್​ ವೇ  ಬಳಿ ರಸ್ತೆ ಕುಸಿತ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು ಭಾರೀ ಮಳೆ : ಏರ್​ಪೋರ್ಟ್​ ರನ್​ ವೇ  ಬಳಿ ರಸ್ತೆ ಕುಸಿತ

ಬಜ್ಪೆ: ಮಂಗಳೂರು ಏರ್​ಪೋರ್ಟ್​ ರನ್​ ವೇ ಬದಿಯಲ್ಲಿಯೇ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿದ್ದು, ಅದ್ಯಪಾಡಿ ಬಳಿ ಇರುವ ರನ್​ ವೇ ಕುಸಿದ ಪರಿಣಾಮ ಅದ್ಯಪಾಡಿಯಿಂದ ಕೈ ಕಂಬ ಹೋಗುವ ರಸ್ತೆ ಬಂದ್​​ ಆಗಿದೆ.

ಅದ್ಯಪಾಡಿ-ಕೈಕಂಬ ಸಂಪರ್ಕಿಸುವ ರಸ್ತೆ ಇದಾಗಿದ್ದು, ಕೆಲ ದಿನಗಳ‌ ಹಿಂದೆಯೇ ಇಲ್ಲಿ ಮೋರಿ ಕುಸಿದಿತ್ತು. ಆ ಬಳಿಕ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಈ ಕುರಿತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಪಷ್ಟನೆ ನೀಡಿದ್ದು, ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸುತ್ತುವರಿದ ರಸ್ತೆಯಲ್ಲಿ ಭೂ ಕುಸಿತವಾಗಿದ್ದು ವಿಮಾನದ ರನ್ ವೇಗೆ ಯಾವುದೇ ಅಪಾಯವಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಚಟುವಟಿಕೆಗಳು ದೈನಂದಿನಂತೆ ನಡೆಯುತ್ತಿದೆ ಎಂದಿದೆ.

ಇನ್ನು ಬಜ್ಪೆ ಏರ್​ಪೋರ್ಟ್​ ರನ್​ ವೇ ಸಮೀಪದಲ್ಲಿಯೇ ಇರುವ ರಸ್ತೆ ಇದಾಗಿದೆ. ರನ್​ ವೇನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಪರಿಣಾಮವಾಗಿ ರಸ್ತೆ ಕುಸಿದೆ ಎಂದು ಅದ್ಯಪಾಡಿಯ ಗ್ರಾಮಸ್ಥರು ಆರೋಪಿಸಿದ್ದಾರೆ.

ರಾಜ್ಯಸಭೆಗೆ ನಾಮನಿರ್ದೇಶನ : ನನಗೆ ಮೋದಿಯವರು ದೇಶಸೇವೆಯ ಅವಕಾಶ ಕೊಟ್ಟಿದ್ದಾರೆ : ಡಾ. ವಿರೇಂದ್ರ ಹೆಗ್ಗಡೆ ಸಂತಸ – Vishwanews24

Leave a Reply