ಮಂಗಳೂರು: ಮಳಲಿಯನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು : ಕಲ್ಲಡ್ಕ ಡಾ. ಪ್ರಭಾಕರ್ ಭಟ್ -Vishwanews24
ಮಂಗಳೂರು: ಮಳಲಿಯನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು : ಡಾ. ಕಲ್ಲಡ್ಕ ಭಟ್ -Vishwanews24
ಮಂಗಳೂರು : ಮಳಲಿಯ ಮಸೀದಿಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಕ್ಕೆ ಸಂಬಂಧಿಸಿದ ಕುರುಹುಗಳು ಸಿಕ್ಕಿದ ಕಾರಣಕ್ಕಾಗಿ ಅದನ್ನು ಒಪ್ಪಂದ ಮಾಡಿಕೊಂಡು ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂದು ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಹೇಳಿದ್ದಾರೆ.
ಇಂತಹ ಅನೇಕ ಕೇಂದ್ರ ಗಳು ಇವೆ. ಎಲ್ಲವನ್ನೂ ಬಿಟ್ಟುಕೊಡುವ ಒಪ್ಪಂದಕ್ಕೆ ತಯಾರಿರಬೇಕು ಎಂದು ಅವರು ಪರೋಕ್ಷವಾಗಿ ಹೇಳಿದರು. ದೇವಸ್ಥಾನಕ್ಕೆ ಮತ್ತು ಮಸೀದಿ, ಚರ್ಚ್ ಗೆ ವ್ಯತ್ಯಾಸ ಇದೆ. ಅದು ಎರಡೂ ಕೂಡ ಪ್ರಾರ್ಥನಾ ಮಂದಿರಗಳು. ಅದು ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವಸ್ಥಾನ, ದೈವಸ್ಥಾನಗಳಿಗೆ ಇತಿಹಾಸ ಇರುವುದರಿಂದ ಅದೇ ಸ್ಥಳದಲ್ಲಿ ನಿರ್ಮಾಣವಾಗಬೇಕಾಗಿದೆ ಎಂದು ಅವರು ಹೇಳಿದರು.
