ಮಂಗಳೂರು : ಮಳಲಿ ಮಸೀದಿ ವಿವಾದ – ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು : ಡಿಕೆಶಿ ಪ್ರತಿಕ್ರಿಯೆ – Vishwanews24

Featured, ರಾಜ್ಯ ನ್ಯೂಸ್

ಮಂಗಳೂರು : ಮಳಲಿ ಮಸೀದಿ ವಿವಾದ – ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು : ಡಿಕೆಶಿ ಪ್ರತಿಕ್ರಿಯೆ – Vishwanews24

ಬೆಂಗಳೂರು : ಮಂಗಳೂರಿನ ಮಳಲಿ ಮಸೀದಿ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ,  ಡಿಕೆ ಶಿವಕುಮಾರ್  ಅವರಿಗೆ ಏನೇನು ನಂಬಿಕೆ ಇದೆಯೋ ? ಏನೇನು ಬೇಕಾದ್ರೂ ಮಾಡಿಕೊಳ್ಳಲಿ ನಾವು ಮಧ್ಯಪ್ರವೇಶ ಮಾಡಲ್ಲ.ಅವರು ಈ ರಾಜ್ಯ ಸಾಯಿಸ್ತಿದ್ದಾರೆ. ಅವರ ಸ್ವಂತಕ್ಕೆ, ಮನೆಗೆ ಏನ್ ಬೇಕಾದ್ರೂ ಮಾಡಲಿ. ಸರ್ಕಾರ ಇದೆ, ಅಲ್ಪಸಂಖ್ಯಾತ ಇಲಾಖೆ ಇದೆ, ಮುಜರಾಯಿ ಇಲಾಖೆಯೂ ಇದೆ, ಕ್ಯಾಬಿನೆಟ್ ಇದೆ, ಸರ್ಕಾರಿ ಅಧಿಕಾರಿಗಳು ಇದ್ದಾರೆ.‌ಆದ್ರೆ ಖಾಸಗಿಯಾಗಿ ಹೀಗೆ ಮಾಡಬಾರದು, ಅವರ ವಿರುದ್ಧ ಕೇಸ್ ಹಾಕಬೇಕು ಎಂದು ಮಂಗಳೂರು ತಾಂಬೂಲ ಪ್ರಶ್ನೆ ವಿರುದ್ಧ ಡಿಕೆಶಿ ಕಿಡಿಕಾರಿದರು.

ಇದೊಂದು ಭಾವನಾತ್ಮಕ ವಿಚಾರ. ಅದನ್ನ ಅವರು ಮನೆಯಲ್ಲಿ ಇಟ್ಟುಕೊಳ್ಳಲಿ. ಸರಕಾರ ಮಧ್ಯಪ್ರವೇಶ ಮಾಡ್ಬೇಕು, ಕೂಡಲೇ ಬಂಧಿಸಬೇಕು. ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು. ಜಿಲ್ಲಾಧಿಕಾರಿ, ಎಸ್‌ಪಿ‌ ಮಧ್ಯಪ್ರವೇಶ ಮಾಡ್ಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.

ಕಾಂಗ್ರೆಸ್‌ಗೆ ಬಿಗ್‌ ಶಾಕ್, ಹಿರಿಯ ನಾಯಕ ಕಪಿಲ್ ಸಿಬಲ್ ರಾಜೀನಾಮೆ, SPಯಿಂದ ನಾಮಪತ್ರ – Vishwanews24

Leave a Reply