ಮಂಗಳೂರು: ಮೀನುಗಾರಿಕಾ ಬೋಟ್ ಅಪಘಾತ – 2 ಮೀನುಗಾರ ಮೃತ್ಯು, 12 ಮಂದಿ ನಾಪತ್ತೆ -Vishwanews24
ಮಂಗಳೂರು: ಮೀನುಗಾರಿಕಾ ಬೋಟ್ ಅಪಘಾತ – 2 ಮೀನುಗಾರ ಮೃತ್ಯು, 12 ಮಂದಿ ನಾಪತ್ತೆ -Vishwanews24
ಮಂಗಳೂರು, : ಕರಾವಳಿಯ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್ ಅಪಘಾತವಾದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ.
ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಹಾಗೂ ಬಂಗಾಳ ಮೂಲದ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬೇಪೋರ್ನಿಂದ ಹೊರಟಿದ್ದು, ಮಂಗಳೂರು ಬಂದರಿನಿಂದ ನೂರಾರು ಕಿ.ಮೀ ದೂರದ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್ ಅಪಘಾತವಾಗಿದೆ.
ಮಂಗಳೂರು: ಯುವತಿಗೆ ಗುಪ್ತಾಂಗ ತೋರಿಸಿದ್ದ ಆರೋಪಿ ಪೊಲೀಸ್ ವಶಕ್ಕೆ -Vishwanews24
ಅಪಘಾತದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ. ಇಂಡಿಯನ್ ಕೋಸ್ಟ್ ಗಾರ್ಡ್ನ ಮೂರು ಹಡಗು ಹಾಗೂ ಏರ್ ಕ್ರಾಫ್ಟ್ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ.
ಘಟನೆಯ ಬಗ್ಗೆ ಭಾರತೀಯ ಕೋಸ್ಟ್ ಗಾರ್ಡ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
In a swift sea-air #SAR operation @IndiaCoastGuard deployed 03 #ICG ships & aircraft to search for 14 fishermen of IFB ‘Rabah’ approx 43 NM west #NewMangalore #today. 02 crew found, search for other crew in progress.@DefenceMinIndia @Min_FAHD @shipmin_india @SpokespersonMoD
— Indian Coast Guard (@IndiaCoastGuard) April 13, 2021
