ಮಂಗಳೂರು: ಮುಂಗಾರು ಆರ್ಭಟ : ದ.ಕ. ಜಿಲ್ಲೆಯಲ್ಲಿ ನಾಳೆ(ಜು.1) ಶಾಲೆ- ಕಾಲೇಜಿಗೆ ರಜೆ – Vishwanews24 

Featured, ದಕ್ಷಿಣ ಕನ್ನಡ

ಮಂಗಳೂರು: ಮುಂಗಾರು ಆರ್ಭಟ : ದ.ಕ. ಜಿಲ್ಲೆಯಲ್ಲಿ ನಾಳೆ(ಜು.1) ಶಾಲೆ- ಕಾಲೇಜಿಗೆ ರಜೆ – Vishwanews24 

ಮಂಗಳೂರು: ಮುಂಗಾರು ಆರ್ಭಟ ಮುಂದುವರಿದ ಹಿನ್ನಲೆಯಲ್ಲಿ ನಾಳೆ (ಜು.1) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ-ಕಾಲೇಜಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಆರೆಂಜ್ ಅಲರ್ಟ್ ಆಗಿದ್ದು, ಈ ಮಧ್ಯೆಯೂ ಮಳೆ ಬಿರುಸಾಗಿದೆ. ಮಂಗಳೂರು ನಗರ ಸೇರಿದಂತೆ ನಾನಾ ಕಡೆ ಮಹಾಮಳೆಗೆ ಜಲಾವೃತವಾಗಿದೆ. ಈ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನ ಬಳಿಕ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದ್ದು, ಮಳೆ ಬಿರುಸು ಮುಂದುವರಿದ ಹಿನ್ನಲೆಯಲ್ಲಿ ಶುಕ್ರವಾರವೂ ರಜೆ ಘೋಷಿಸಲಾಗಿದೆ.

Leave a Reply