ಮಂಗಳೂರು : ಯುವತಿ ನಾಪತ್ತೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ದೆಹಲಿ ಮೂಲದ ಯುವತಿ ನಾಪತ್ತೆ

ಮಂಗಳೂರು: ಅಶೋಕನಗರ ಗೋಕುಲ ಕಲ್ಯಾಣ ಮಂಟಪ ಬಳಿಯ ನಿವಾಸಿ, ಮೂಲತಃ ನವದೆಹಲಿಯವರಾದ, 5 ವರ್ಷಗಳಿಂದ ನಗರದಲ್ಲಿರುವ ಬಂಧುಗಳ ಮನೆಯಲ್ಲಿ ನೆಲೆಸಿದ್ದ ದೀಕ್ಷಿತಾ ಅಲಿಯಾಸ್‌ ರಿಯಾ (20) ನಾಪತ್ತೆಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಬುದ್ಧಿಮಾತು ಹೇಳಿದ್ದರು. ಏ. 4ರಂದು ಸಂಜೆ 5 ಗಂಟೆಗೆ ಮನೆಯಿಂದ ತೆರಳಿದವರು ಮರಳಿಲ್ಲ.

ಎತ್ತರ 5.1 ಅಡಿ ಎತ್ತರ, ದುಂಡು ಮುಖ ಗೋಧಿ ಮೈಬಣ್ಣ. ಮನೆಯಿಂದ ಹೋಗುವಾಗ ಹಳದಿ ನೀಲಿ ಮಿಶ್ರಿತ ಚೂಡಿದಾರ ಧರಿಸಿದ್ದು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಯುವತಿ ಕಂಡುಬಂದಲ್ಲಿ ಉರ್ವ ಪೊಲೀಸ್‌ ಠಾಣೆ ಅಥವಾ ಕಂಟ್ರೋಲ್‌ ರೂಮ್‌ ಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕರಾವಳಿಯಲ್ಲಿ ಎಲ್ಲೋ ಅಲರ್ಟ್ : ಮುಂದಿನ ಎರಡು ದಿನ ಸಾಧಾರಣ ಮಳೆ ಸಾಧ್ಯತೆ – Vishwanews24

Leave a Reply