ಮಂಗಳೂರು : ರಾವತ್ ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರು ದೇಶ ವಿರೋಧಿಗಳು : ಯು.ಟಿ.ಖಾದರ್ – VIshwanews24
ರಾವತ್ ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವವರು ದೇಶ ವಿರೋಧಿಗಳು..
ಮತಾಂತರ ನಿಷೇಧ ಕಾಯ್ದೆ ಪಾಲಿಟಿಕಲ್ ಗಿಮಿಕ್ ..
ಮಂಗಳೂರು: ಜನರಲ್ ಬಿಪಿನ್ ರಾವತ್ ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರು ದೇಶ ವಿರೋಧಿಗಳು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್, “ಜನರಲ್ ಬಿಪಿನ್ ರಾವತ್ ಅವರ ಸಾವಿನ ನಂತರ ಇಡೀ ದೇಶವು ಆಘಾತಕ್ಕೊಳಗಾಗಿದೆ, ಆದರೆ ಕೆಲವರು ಅವರ ಸಾವನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸುತ್ತಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದರು.
“ಈ ರೀತಿಯಾಗಿ ಬಿಪಿನ್ ಅವರ ಸಾವನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸುತ್ತಿರುವವರ ಮುಖಗಳನ್ನು ಸರ್ಕಾರವು ಮಾಧ್ಯಮಗಳ ಮೂಲಕ ಬಹಿರಂಗಪಡಿಸಬೇಕು. ಇಂತಹ ಟೀಕಾಕಾರರು ದೇಶವಿರೋಧಿಗಳಾಗಿದ್ದು, ಅವರನ್ನು ದೇಶದಿಂದ ಹೊರಹಾಕಬೇಕು. ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದಾಗ ಬಿಜೆಪಿ ಶಾಸಕರು ಅವರನ್ನು ದೇಶವಿರೋಧಿ ಎಂದು ಬಣ್ಣಿಸಿದರು. ಆದರೆ ಇಂದು ಕಿಡಿಗೇಡಿಗಳು ಜನರಲ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸುತ್ತಿರುವಾಗ ಬಿಜೆಪಿಯ ಯಾವೊಬ್ಬ ನಾಯಕರೂ ಅದರ ಬಗ್ಗೆ ಮಾತನಾಡಿಲ್ಲ ಮತ್ತು ಅವರನ್ನು ದೇಶವಿರೋಧಿಗಳೆಂದು ಬಣ್ಣಿಸಿಲ್ಲ. ಅಪರಾಧಿಗಳ ಮುಖವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಪೊಲೀಸ್ ಇಲಾಖೆ ಏಕೆ ವಿಳಂಬವಾಗಿದೆ? ಜನರಲ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸುವ ಮುಖಗಳನ್ನು ಸಾರ್ವಜನಿಕರು ನೋಡಬೇಕು” ಎಂದು ಆಗ್ರಹಿಸಿದ್ದಾರೆ.
ಉಡುಪಿ : ಕೆಎಸ್ಆರ್ಟಿಸಿ ಬಸ್ ಟಿಕೆಟ್’ಗಳಲ್ಲಿ ಕೊರೋನಾ ಜಾಗೃತಿ ಸಂದೇಶ : ಡಿಸಿ ಶ್ಲಾಘನೆ – Vishwanews24
