ಮಂಗಳೂರು: ವಂದೇಭಾರತ್‌, ಎಕ್ಸ್‌ಪ್ರೆಸ್‌ ಸಹಿತ ಹಲವು ರೈಲುಗಳಿಗೆ ಜ. 1ರಿಂದ ಹೊಸ ಸಂಖ್ಯೆ ಜಾರಿ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ರೈಲ್ವೇ ವಿಭಾಗಗಳ ವ್ಯಾಪ್ತಿ ಬದಲಾವಣೆ; ಮಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ

ಮಂಗಳೂರು: ನೈಋತ್ಯ ರೈಲ್ವೇಯ ಮೈಸೂರು ವಿಭಾಗ ಮತ್ತು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗಗಳ ನಡುವಿನ ಆಡಳಿತಾತ್ಮಕ ವ್ಯಾಪ್ತಿ ಬದಲಾವಣೆ ಹಿನ್ನೆಲೆಯಲ್ಲಿ ಮಂಗಳೂರು ಸಂಪರ್ಕಿಸುವ ಹಲವು ಎಕ್ಸ್‌ಪ್ರೆಸ್, ವಂದೇ ಭಾರತ್ ಹಾಗೂ ಪ್ಯಾಸೆಂಜರ್‌ರೈಲುಗಳ ಸಂಖ್ಯೆಯನ್ನು ಬದಲಾಯಿಸಲಾಗಿದೆ.

ಪರಿಷ್ಕೃತ ರೈಲು ಸಂಖ್ಯೆಗಳು 2027ರ ಜ. 1ರಿಂದ ಜಾರಿಗೆ ಬರಲಿವೆ. ರೈಲುಗಳ ವೇಳಾಪಟ್ಟಿ ಹಾಗೂ ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೇ ಪ್ರಕಟನೆ ತಿಳಿಸಿದೆ.

ಆನೇಕಲ್ : ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ವೇಳೆ ದುರಂತ; ಮೂವರು ಕಾರ್ಮಿಕರು ಸಾವು – vishwanews24

ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್‌ ಮಲಬಾರ್‌ಡೈಲಿ ಎಕ್ಸ್‌ಪ್ರೆಸ್ ಇನ್ನು ಮುಂದೆ 16230 (ಹಳೆ ಸಂಖ್ಯೆ 16629) ಸಂಖ್ಯೆಯೊಡನೆ ಸಂಚರಿಸಲಿದೆ. ಮಂಗಳೂರು-ತಿರುವನಂತಪುರಂ ಸೆಂಟ್ರಲ್ ಮಲಬಾರ್‌ಡೈಲಿ ಎಕ್ಸ್‌ಪ್ರೆಸ್ 16229 (ಹಳೆ ಸಂಖ್ಯೆ 16630) ಆಗಲಿದೆ. ಮಂಗಳೂರು- ತಿರುವನಂತಪುರಂ ಸೆಂಟ್ರಲ್ ಮಾವೇಲಿ ಡೈಲಿ ಎಕ್ಸ್‌ಪ್ರೆಸ್ 16233 (16603) ಆಗಲಿದೆ. ತಿರುವನಂತಪುರಂ – ಮಂಗಳೂರು ಮಾವೇಲಿ ಡೈಲಿ ಎಕ್ಸ್‌ಪ್ರೆಸ್‌ 16234 (16604). ಮಂಗಳೂರು-ಕನ್ಯಾಕುಮಾರಿ ಪರಶುರಾಮ್ ಡೈಲಿ ಎಕ್ಸ್ ಪ್ರಸ್ 16249 (16649), ಕನ್ಯಾಕುಮಾರಿ-ಮಂಗಳೂರು ಪರಶುರಾಮ್ ಡೈಲಿ ಎಕ್ಸ್‌ಪ್ರೆಸ್ 16250 (16650), ಮಂಗಳೂರು – ತಿರುವನಂತಪುರಂ ಎರ್ನಾಡ್ ಡೈಲಿ ಎಕ್ಸ್‌ಪ್ರೆಸ್ 16237 (16605), ತಿರುವನಂತಪುರಂ – ಮಂಗಳೂರು ಎರ್ನಾಡ್ ಡೈಲಿ ಎಕ್ಸ್‌ಪ್ರೆಸ್ 16238 (16606), ಮಂಗಳೂರು -ರಾಮೇಶ್ವರಂ ವಾರದ ಎಕ್ಸ್‌ಪ್ರೆಸ್ 16241(16622) ಆಗಲಿದ್ದು, ಜ. 2ರಿಂದ ಜಾರಿಗೆ ಬರಲಿದೆ.

ರಾಮೇಶ್ವರಂ – ಮಂಗಳೂರು ವಾರದ ಎಕ್ಸ್‌ಪ್ರೆಸ್ 16242 (16621) ಆಗಲಿದ್ದು, ಜ. 3ರಿಂದ ಜಾರಿಗೆ ಬರಲಿದೆ.

ಮಂಗಳೂರು: ಶಾಲಾ ಟ್ಯಾಕ್ಸಿಗೆ ಕಂಟೇನರ್ ಲಾರಿ ಡಿಕ್ಕಿ; ನಾಲ್ವರು ವಿಶೇಷ ಚೇತನ ಮಕ್ಕಳು ಸೇರಿ ಆರು ಮಂದಿ ಪ್ರಾಣಾಪಾಯದಿಂದ ಪಾರು – vishwanews24

ಮಂಗಳೂರು – ಕೊಯಮತ್ತೂರು ಡೈಲಿ ಎಕ್ಸ್‌ಪ್ರೆಸ್ 16243(16324), ಕೊಯಮತ್ತೂರು- ಮಂಗಳೂರು ಡೈಲಿ ಎಕ್ಸ್‌ಪ್ರೆಸ್ 16244 (16323), ಮಂಗಳೂರು-ಪಾಲಕ್ಕಾಡ್ ಡೈಲಿ ಎಕ್ಸ್‌ಪ್ರೆಸ್ 16245 (16610) ಆಗಲಿದೆ.

ಮಂಗಳೂರು-ತಿರುವನಂತಪುರಂ ವಂದೇ ಭಾರತ್ ಎಕ್ಸ್ ಪ್ರೆಸ್ 26659 (20631), ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 26660 (20632), ಮಂಗಳೂರು- ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ 26657 (20646), ಮಡಗಾಂವ್-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 26658 (20645) ಆಗಲಿದೆ.

ಕೆಎಸ್‌ಆರ್‌ಟಿಸಿ ಪ್ರಯಾಣ ದರ ಹೆಚ್ಚಳ: ಉಡುಪಿ, ದಕ್ಷಿಣ ಕನ್ನಡ ಮಾರ್ಗಗಳ ದರಪಟ್ಟಿ – vishwanews24

ದೈನಂದಿನ ಪ್ಯಾಸೆಂಜರ್ ರೈಲುಗಳು
ಮಂಗಳೂರು – ಸುಬ್ರಹ್ಮಣ್ಯ ರೋಡ್ 56225 (56625), ಸುಬ್ರಹ್ಮಣ್ಯ ರೋಡ್ – ಮಂಗಳೂರು 56226 (56626), ಮಂಗಳೂರು – ಸುಬ್ರಹ್ಮಣ್ಯ ರೋಡ್ 56227 (56627), ಸುಬ್ರಹ್ಮಣ್ಯ ರೋಡ್ – ಮಂಗಳೂರು ಸಂಖ್ಯೆ 56228 (56628)
ಮಂಗಳೂರು-ಸುಬ್ರಹ್ಮಣ್ಯ ರೋಡ್ 56233 (56629), ಸುಬ್ರಹ್ಮಣ್ಯ ರೋಡ್ – ಮಂಗಳೂರು 56234 (56630). ಮಡಗಾಂವ್-ಮಂಗಳೂರು 56216 (56615) ಪ್ಯಾಸೆಂಜರ್ ರೈಲು, ಮಂಗಳೂರು – ಮಡಗಾಂವ್ ಪ್ಯಾಸೆಂಜರ್ ರೈಲು 56215 (56616), ಚರ್ವತ್ತೂರು-ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಸಂಖ್ಯೆ 56214 (56621) ಆಗಲಿದೆ.

Leave a Reply