Featured

ಮಂಗಳೂರು: ವ್ಯಕ್ತಿಯ ಅಪಹರಿಸಿ ದರೋಡೆ ಪ್ರಕರಣ : ಪೊಲೀಸ್ ಸಿಬ್ಬಂದಿ ಸೇರಿ ಐವರ ಬಂಧನ – vishwanews24

ಮಂಗಳೂರು: ವ್ಯಕ್ತಿಯ ಅಪಹರಿಸಿ ದರೋಡೆ ಪ್ರಕರಣ : ಪೊಲೀಸ್ ಸಿಬ್ಬಂದಿ ಸೇರಿ ಐವರ ಬಂಧನ

ಮಂಗಳೂರು: ವ್ಯಕ್ತಿಯೊಬ್ಬರನ್ನು ಅಪಹರಿಸಿ 1.15 ಕೋಟಿ ರೂ. ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಐವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅಕ್ಟೋಬರ್ 28ರಂದು ಮಂಗಳೂರಿನ ಲಾಲ್‌ಬಾಗ್‌ನಲ್ಲಿ ಈ ಘಟನೆ ನಡೆದಿತ್ತು. ಬಂಧಿತರನ್ನು ಕಾಪು ಮೂಲದ ರಿಯಾಜ್, ಹಳಿಯಾಳದ ನಸ್ರುಲ್ಲಾ ಖಾನ್, ಕಾರವಾರದ ನಿತ್ಯಾನಂದ, ಫರಂಗಿಪೇಟೆಯ ಖಾಲಿದ್ ಹಾಗೂ ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ್ ಎಂದು ಗುರುತಿಸಲಾಗಿದೆ. ಕಾರವಾರದ ಗಣೇಶ್ ಕೋಳಂಕರ ಎಂಬಾತ ತಲೆಮರೆಸಿಕೊಂಡಿರುವ ಆರೋಪಿ.

ದಾವಣಗೆರೆಯ ನಿವಾಸಿ ಸತ್ಯನಾರಾಯಣ ಅವರು ತಮ್ಮ ಮಾಲೀಕ ನಾಗರಾಜ್ ಶೆಟ್ ಅವರ ಸೂಚನೆಯಂತೆ ಮಂಗಳೂರಿಗೆ ಬಂದಿದ್ದರು. ನಾಗರಾಜ್ ಶೆಟ್ ಅವರು ದಾವಣಗೆರೆಯಲ್ಲಿ ಅಡಿಕೆ ತೋಟ ಹಾಗೂ ಆಭರಣ ಮಳಿಗೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಸತ್ಯನಾರಾಯಣ ಅವರು ಲಾಲ್‌ಬಾಗ್‌ನಲ್ಲಿ ಬಸ್‌ನಿಂದ ಇಳಿದ ಸ್ವಲ್ಪ ಸಮಯದಲ್ಲೇ ನಾಲ್ವರು ಅಪರಿಚಿತರು ಅವರನ್ನು ಅಪಹರಿಸಿದ್ದರು. ಬಳಿಕ ಆರೋಪಿಗಳು ಸುಮಾರು ಒಂದು ಗಂಟೆಗಳ ಕಾಲ ಕಾರಿನಲ್ಲಿ ನಗರದ ವಿವಿಧೆಡೆ ಸುತ್ತಾಡಿಸಿ, ಕಾವೂರು ಗುಡ್ಡೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು.

ಅಲ್ಲಿ ಸತ್ಯನಾರಾಯಣ ಅವರ ಬಳಿಯಿದ್ದ 1.15 ಕೋಟಿ ರೂ. ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಅವರನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಸತ್ಯನಾರಾಯಣ ನೀಡಿದ ದೂರಿನ ಆಧಾರದ ಮೇಲೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ನಡೆಸಿದ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಗಣೇಶ್ ಕೋಳಂಕರನ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.

Vishwa News 24

Recent Posts

ಬೆಳ್ತಂಗಡಿ: ಯುವಕ ಆತ್ಮಹತ್ಯೆ  – vishwanews24

ಬೆಳ್ತಂಗಡಿ: ಯುವಕ ಆತ್ಮಹತ್ಯೆ  ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ಎಂಬಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.…

57 minutes ago

ನಾನು ಸಿಎಂ ಆಗಿರುವುದನ್ನು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ : ಡಿ.ಕೆ. ಶಿವಕುಮಾರ್ – vishwanews24

ನಾನು ಸಿಎಂ ಆಗಿರುವುದನ್ನು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ; ದಿನವೂ ನನ್ನ ವಿರುದ್ಧ ನೆಗೆಟಿವ್ ಹುಡುಕುತ್ತಾರೆ : ಡಿ.ಕೆ. ಶಿವಕುಮಾರ್ ಮೈಸೂರು:…

1 hour ago

ನ.14 ರಿಂದ 20 ರವರೆಗೆ ಉಡುಪಿ ಜಿಲ್ಲೆಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ : ಇಂದ್ರಾಳಿ ಜಯಕರ್ ಶೆಟ್ಟಿ – vishwanews24

ಉಡುಪಿ ಜಿಲ್ಲೆಯ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಮಾಹಿತಿ ನೀಡಿದ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ -vishwanews24 ಉಡುಪಿ…

1 hour ago

ನಾಳೆ ಬೆಂಗಳೂರಿಗೆ ಪ್ರಧಾನಿ ; ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ; ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು – vishwanews24

ನಾಳೆ ಬೆಂಗಳೂರಿಗೆ ಪ್ರಧಾನಿ ; ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ; ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು ಬೆಂಗಳೂರು: ಪ್ರಧಾನಮಂತ್ರಿ…

2 hours ago

ಶಿರ್ವ: ಗೂಗಲ್ ಪೇಗೆ ಹಣ ಜಮೆಯಾದ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಗೆ ₹2.49 ಲಕ್ಷ ವಂಚನೆ – vishwanews24

ಶಿರ್ವ: ಗೂಗಲ್ ಪೇಗೆ ಹಣ ಜಮೆಯಾದ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಗೆ ₹2.49 ಲಕ್ಷ ವಂಚನೆ ಶಿರ್ವ: ಮೊಬೈಲಿನಲ್ಲಿರುವ ಗೂಗಲ್…

2 hours ago

ನ.13ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಡುಪಿಗೆ ಭೇಟಿ – vishwanews24

ನ.13ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಡುಪಿಗೆ ಭೇಟಿ ಉಡುಪಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್…

2 hours ago