ಮಂಗಳೂರು : ಶಫೀಕ್ ಅಮಾಯಕ, ಆತನನ್ನ ಬಿಟ್ಟು ಬಿಡಿ ಆತ ಅಪರಾಧಿಯಲ್ಲ : ಶಫೀಕ್ ಪತ್ನಿ ಅನ್ಶಿಫಾ ಮನವಿ – Vishwanews24

Featured, ದಕ್ಷಿಣ ಕನ್ನಡ

ಶಫೀಕ್ ಅಮಾಯಕ. ಆತನನ್ನ ಆರಸ್ಟ್ ಮಾಡಲಾಗಿದೆ..

ಆತ PFI, SDPIನಲ್ಲಿ ಸಕ್ರಿಯನಾಗಿದ್ದ ಹಾಗಂತ ಆತ ಆರೋಪಿಯಲ್ಲ  

ನಿಜವಾದ ಆರೋಪಿಯನ್ನು ಬಂಧಿಸಿ ಶಫೀಕ್ ನನ್ನ ಬಿಟ್ಟು ಬಿಡಿ ಆತ ಅಪರಾಧಿಯಲ್ಲ

ಮಂಗಳೂರು: ಬಿಜೆಪಿ ಜಲ್ಲಾ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿಲಾಗುಇದೆ. ಇದೀಗ ಓರ್ವ ಆರೋಪಿ ಶಫೀಕ್ ಪತ್ನಿ ಅನ್ಶಿಫಾ  ಮಾತನಾಡಿದ್ದಾರೆ.

ಶಫೀಕ್ ಅಮಾಯಕ. ಆತನನ್ನ ಆರಸ್ಟ್ ಮಾಡಲಾಗಿದೆ. ಆತ PFI, SDPIನಲ್ಲಿ ಸಕ್ರಿಯನಾಗಿದ್ದ ಹಾಗಂತ ಆತ ಆರೋಪಿಯಲ್ಲ. ನಿಜವಾದ ಆರೋಪಿಯನ್ನು ಬಂಧಿಸಿ ಶಫೀಕ್ ನನ್ನ ಬಿಟ್ಟು ಬಿಡಿ ಆತ ಅಪರಾಧಿಯಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ಪ್ರವೀಣ್ ಕುಮಾರ್ ನೆಟ್ಟಾರು ದುಷ್ಕರ್ಮಿಗಳ ಕೈಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದರು. ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಿದ್ದಾರೆ.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ವಿದ್ಯಾರ್ಥಿಗಳಿಗೆ 500 ಗಿಡ ವಿತರಣೆ – Vishwanews24

ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ. ಆರೋಪಿಗಳನ್ನು ಹಿಂದೆ ನ್ಯಾಯಾಲಕ್ಕೆ ಹಾಜರು ಮಾಡುತ್ತೇವೆ ಎಂದು ದಕ್ಷಿಣಕನ್ನಡ ಎಸ್‍ಪಿ ಹೃಷಿಕೇಶ್ ಸೋನಾವಣೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ರೂ. ಪರಿಹಾರ ನೀಡಲು ನಿರ್ಧಾರ : ನಳೀನ್ – Vishwanews24

Leave a Reply