ಮಂಗಳೂರು: ಸಂಘಪರಿವಾರದ ಮುಖಂಡನ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನಅಮಾನತು ಮಾಡಿ : ಹಿಂದೂ ಜಾಗರಣ ವೇದಿಕೆ ಆಗ್ರಹ – Vishwanews24
ಮಂಗಳೂರು: ಸಂಘಪರಿವಾರದ ಮುಖಂಡನ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನಅಮಾನತು ಮಾಡಿ : ಹಿಂದೂ ಜಾಗರಣ ವೇದಿಕೆ ಆಗ್ರಹ
ಮಂಗಳೂರು: ನಿನ್ನೆ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದ ಸಂಘಪರಿವಾರದ ಹಿರಿಯ ನಾಯಕ ಕಾಸರಗೋಡಿನ ಪಿ. ರಮೇಶ್ ಅವರ ಮೇಲೆ ಲಾಠಿ ಬೀಸಿದ ಹಾಗೂ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಅವರ ಮೇಲೆ ಲಾಠಿ ಬೀಸಿ, ಸ್ಥಳದಿಂದ ಹೊರದಬ್ಬುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯಿಂದ ವೈರಲ್ ಆಗುತ್ತಿದ್ದು,
ಇವರು ಸಂಘಪರಿವಾರದ ಹಿರಿಯ ನಾಯಕರಾಗಿದ್ದು, 1994ರಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸತ್ಯಜಿತ್ ಸುರತ್ಕಲ್, ಅನಂತಕುಮಾರ್ ಹೆಗ್ಡೆ ,ಜೊತೆ ಪೊಲೀಸರ ಲಾಠಿ ಪ್ರಹಾರದ ಮಧ್ಯೆ ರಮೇಶ್ ಅವರು ತಿರಂಗಾ ಹಾರಿಸಿದ ತಂಡದಲ್ಲಿದ್ದರು.
ಇದು ಕಾರ್ಯಕರ್ತರ ಮೇಲೆ ನಡೆಸಿ ಅಮಾನವೀಯ ಕೃತ್ಯ ಎಂದು ಬರಹಗಳ ಜೊತೆ ವೈರಲ್ ವೀಡಿಯೋ ಹರಿದಾಡುತ್ತಿದೆ.
ಈ ಕೃತ್ಯವನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಅವರ ಮೇಲೆ ಲಾಠಿಯಿಂದ ಹಲ್ಲೆ ಮಾಡಿದ ಸುಬ್ರಮಣ್ಯ ಪೊಲೀಸ್ ಠಾಣೆ SI ಜಂಬುರಾಜ್, ಬೆಳ್ಳಾರೆ ಪೋಲಿಸ್ ಬಾಲಕೃಷ್ಣ, ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ಆಗ್ರಹಿಸಿದೆ.
ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನ ಉಗ್ರ ಪ್ರತಿಭಟನೆ ಮಾಡಬೇಕಾದೀತು ಎಂದು ಈ ಮೂಲಕ ಎಚ್ಚರಿಕೆ ನೀಡಿದೆ.
ಬಿಜೆಪಿ ಮತ್ತು ಪರಿವಾರ ಸಂಘಟನೆಯಲ್ಲಿ ಅನೇಕ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿರುವ ಪಿ. ರಮೇಶ್ ರವರು ಕಾಸರಗೋಡಿನಲ್ಲಿ ಜ್ಯೋತಿಶ್ ಆತ್ಮಹತ್ಯೆಗೈದಾಗ ಬಿಜೆಪಿ ನಾಯಕರ ನಿರ್ಲಕ್ಷ್ಯಕ್ಕೆ ಬೇಸತ್ತು ತಮ್ಮ ಜಿಲ್ಲಾ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆ: ಸಚಿವ ಸುನಿಲ್ ಕುಮಾರ್ ರಾಜೀನಾಮೆಗೆ ಕಾಂಗ್ರೇಸ್ ಆಗ್ರಹ – Vishwanews24
