ಮಂಗಳೂರು: 44 ಕೆ.ಜಿ. ಗಾಂಜಾ ವಶ :ಆರೋಪಿಗಳ ಬಂಧನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: 44 ಕೆ.ಜಿ. ಗಾಂಜಾ ವಶ :ಆರೋಪಿಗಳ ಬಂಧನ -Vishwanews24

ಮಂಗಳೂರು: ತೆಲಂಗಾಣ ಹಾಗೂ ಬೀದರನಿಂ ಅಪಾರ ಪ್ರಮಾಣದ ಗಾಂಜಾ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 44 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ನರಿಂಗಾನದ ತೌಡುಗೋಳಿ ಕ್ರಾಸ್ ನಿವಾಸಿ ಅಬ್ದುಲ್ ಅಝೀಝ್ ಯಾನೆ ಪೋಕರ್ ಅಝೀಝ್, ಹಫೀಝ್ ಯಾನೆ ಅಪ್ಪಿ ಯಾನೆ ಮೊಯ್ದೀನ್, ತೆಲಂಗಾಣದ ವಿಠಲ್ ಚೌವ್ಹಾಣ್ ಮತ್ತು ಬೀದರ್ ನ ಸಂಜೀವ್ ಕುಮಾರ್ , ಕಲ್ಲಪ್ಪ ಎಂಬವರನ್ನು ಬಂಧಿಸಲಾಗಿದೆ.

ಪಡುಬಿದ್ರಿ : ಗಾಂಜಾ ಸೇವನೆ ಪ್ರಕರಣ ; ಯುವಕ ಪೊಲೀಸರ ವಶಕ್ಕೆ -Vishwanews24

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆ ನಡೆಸಿದಾಗ, ಮೊಹ್ಮದ್ ಹಾಫಿಜ್, ಸಂದೀಪ್ ಎಂಬುವವರ ಶಾಮೀಲಾಗಿರುವುದು ಪತ್ತೆಯಾಗಿದೆ. ಉಳ್ಳಾಲ ಪೊಲೀಸರು ಈ ಇಬ್ಬರನ್ನೂ ಬಂಧಿಸಿದ್ದಾರೆ.

ಆರೋಪಿಗಳಿಂದ ಎರಡು ಕಾರು, 44 ಕೆ.ಜಿ. ಗಾಂಜಾ, ಏಳು ಮೊಬೈಲ್ ಸೇರಿದಂತೆ ₹23 ಲಕ್ಷ ಮೌಲ್ಯದ ವಸ್ತುಗಳನ್ನು  ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.