ಮಂಗಳೂರು: SDPI, PFI ನಾಯಕರ ಮನೆ ಮೇಲೆ ದಾಳಿ ; ಐವರು ಅರೆಸ್ಟ್‌ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: SDPI, PFI ನಾಯಕರ ಮನೆ ಮೇಲೆ ದಾಳಿ ; ಐವರು ಅರೆಸ್ಟ್‌

ಮಂಗಳೂರು: ಎಸ್‌ಡಿಪಿಐ(SDPI) ಮತ್ತು ನಿಷೇಧಿತ ಪಿಎಫ್‌ಐ(PFI) ಸಂಘಟನೆಯ ಮುಖಂಡರು, ಕಾರ್ಯಕರ್ತರ ಮನೆ ಮೇಲೆ ಪೊಲೀಸ್‌ ದಾಳಿ ನಡೆದಿದೆ.

ಈ ಹಿಂದೆ ನಡೆದ ದಾಳಿಯ ಮುಂದುವರಿದ ಭಾಗವಾಗಿ ಮಂಗಳೂರಿನ ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿ ಎಂಟು ಕಡೆ ದಾಳಿ ನಡೆಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ನೇತೃತ್ವದಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ: ಉಡುಪಿ: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ; ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ – Vishwanews24

ಈ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ವ್ಯಕ್ತಿಗಳು ತಲೆ ಮರೆಸಿಕೊಂಡಿದ್ದರು. ಈಗ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ 5 ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಎಸ್‌ಡಿಪಿಐ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿ ಪಿಎಫ್‌ಐ ಜೊತೆಗಿನ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

Leave a Reply