ಮಂಜನಾಡಿ ಗುಡ್ಡ ಕುಸಿತ ದುರಂತಕ್ಕೆ ಒಂದೂವರೆ ವರ್ಷ: ಇನ್ನೂ ದಾಖಲಾಗದ ಎಫ್ಐಆರ್ – vishwanews24
ಮಂಜನಾಡಿ ಗುಡ್ಡ ಕುಸಿತ ದುರಂತಕ್ಕೆ ಒಂದೂವರೆ ವರ್ಷ: ಇನ್ನೂ ದಾಖಲಾಗದ ಎಫ್ಐಆರ್
ಈ ಮಧ್ಯೆ ಸಂತ್ರಸ್ತ ಕುಟುಂಬಕ್ಕೆ ನಿವೇಶನ ನೀಡಲು ಜಿಲ್ಲಾಡಳಿತ ಮುಂದಾ ಗಿರುವ ಮಾಹಿತಿ ಲಭ್ಯವಾಗಿದೆ. ಆದರೆ ಅದು ನೀಡಿದ ಮೇಲೆಯೇ ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಆರಂಭದಲ್ಲಿ ಎಂಜಿನಿಯರ್ಗಳ ಮೂಲಕ ತನಿಖೆ ನಡೆಸಲು ಮುಂದಾಗಿ, ಅದು ಅಪೂರ್ಣಗೊಂಡ ಬಳಿಕ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಎನ್ಐಟಿಕೆ ತಜ್ಞರು ಸ್ಥಳ ಮಹಜರು ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಇದರಲ್ಲಿ ರಸ್ತೆ ನಿರ್ಮಾಣದ ನಿರ್ಲಕ್ಷ್ಯವೂ ಸಹಿತ ಮೂರು ಕಾರಣಗಳನ್ನು ನೀಡಿದೆ. ಈ ವರದಿ ಪೊಲೀಸ್ ಇಲಾಖೆಗೂ ಸಲ್ಲಿಕೆಯಾಗಿದ್ದರೂ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಎಂಜಿನಿಯರ್ಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎನ್ನಲಾಗಿದೆ.
ಅ 11 ರಿಂದ 21 ರವರೆಗೆ ಉಚ್ಚಿಲ ದಸರಾ : ಅ. 12 ರಂದು ಮುಖ್ಯಮಂತ್ರಿ ಭಾಗಿ ; ಮಹಿಳಾ ದಸರಾ ಉದ್ಘಾಟನೆ – vishwanews24
ಎನ್ಐಟಿಕೆ ತಜ್ಞರು 2026ರ ಜನವರಿ 13ರಂದು ಸ್ಥಳ ಮಹಜರು ಮಾಡಿ ಘಟನೆಗೆ ಕೆಲವು ಕಾರಣಗಳನ್ನು ಉಲ್ಲೇಖೀಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಭಾರೀ ಮತ್ತು ನಿರಂತರ ಮಳೆ, ಇಳಿಜಾರಿನ ತಳ ಭಾಗದಲ್ಲಿ ಮನೆ ನಿರ್ಮಾಣಕ್ಕಾಗಿ ಅಗೆದದ್ದು, ರಸ್ತೆ ನಿರ್ಮಾಣಕ್ಕಾಗಿ ಮಣ್ಣು ಅಗೆದಿರುವ ಕಾರಣದಿಂದಾಗಿ ಘಟನೆ ಸಂಭವಿಸಿದೆ ಎಂದು ವಿವರಿಸಲಾಗಿದೆ. ಇದರಲ್ಲಿ ಸ್ಥಳದ ದೃಶ್ಯ, ಸ್ಥಳೀಯರ ಮಾಹಿತಿ, ಕುಸಿತವಾಗಿರುವ ಜಾಗದ ಪರಿಶೀಲನೆ, ಮಣ್ಣಿನ ತೆರೆದಿರುವಿಕೆ (ಸಾಯಿಲ್ ಎಕ್ಸ್ಪೋಷರ್), ಅವಶೇಷಗಳ ಲಕ್ಷಣಗಳ ಪರಿ ಶೀಲನೆ, ಇತ್ತೀಚೆಗೆ ಜಾಗದಲ್ಲಿ ಮಾಡಲಾದ ಬದಲಾವಣೆ ಇತ್ಯಾದಿ ಪರಿಶೀಲಿಸಲಾಗಿದೆ.
ಬೆಳ್ತಂಗಡಿ: ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ: ಗಾಯಾಳು ಸಾವು – vishwanews24
ಇದರೊಂದಿಗೆ ಕುಸಿತವಾಗಿರುವ ಜಾಗ ಲ್ಯಾಟೈಟ್ ಮಣ್ಣನ್ನು ಹೊಂದಿರುವ ಕಡಿದಾದ ಸ್ವಾಭಾವಿಕ ಇಳಿಜಾರು ಪ್ರದೇಶವೆಂದು ಉಲ್ಲೇಖೀಸಿದೆ. ಮಾರ್ಗ ಮತ್ತು ಮನೆ ನಿರ್ಮಾಣ ಕ್ಕಾಗಿ ಅಗೆದಿರುವುದರಿಂದ ಇಳಿಜಾರಿನ ತಳಭಾಗಕ್ಕೆ ಅಡಚಣೆ ಉಂಟಾಗಿದೆ. ಸಮರ್ಪಕ ಮೇಲೆ ಮತ್ತು ಒಳಚರಂಡಿ ವ್ಯವಸ್ಥೆಯ ಕೊರತೆ, ಮಣ್ಣಿನ ದ್ರವ್ಯರಾಶಿಯು ಪರ್ಯಾಪ್ತತೆ (ಸ್ಯಾಚುರೇಷನ್) ಮತ್ತು ಮೃದುವಾಗುವ ಲಕ್ಷಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
