Featured

ಮಂಜನಾಡಿ ಗುಡ್ಡ ಕುಸಿತ ದುರಂತಕ್ಕೆ ಒಂದೂವರೆ ವರ್ಷ: ಇನ್ನೂ ದಾಖಲಾಗದ ಎಫ್‌ಐಆರ್ – vishwanews24

ಮಂಜನಾಡಿ ಗುಡ್ಡ ಕುಸಿತ ದುರಂತಕ್ಕೆ ಒಂದೂವರೆ ವರ್ಷ: ಇನ್ನೂ ದಾಖಲಾಗದ ಎಫ್‌ಐಆರ್

ಮಂಗಳೂರು: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರು ಮಣೆಯಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಮಕ್ಕಳು ಸಹಿತ ಮಹಿಳೆ ಮೃತಪಟ್ಟ ಪ್ರಕರಣ ನಡೆದು ಒಂದೂವರೆ ವರ್ಷವಾಗುತ್ತಿದ್ದರೂ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಎಫ್‌ಐಆ‌ರ್ ದಾಖಲಾಗಿಲ್ಲ. ಎನ್‌ಐಟಿಕೆ ಪರಿಣಿತರು ರಸ್ತೆ ನಿರ್ಮಾಣ ಸಂದರ್ಭ ವಹಿಸಿರ ಬಹುದಾದ ನಿರ್ಲಕ್ಷ್ಯವೂ ಕುಸಿತಕ್ಕೆ ಒಂದು ಕಾರಣ ಎಂದು ಉಲ್ಲೇಖಿಸಿದೆ. ಆದರೂ ಎಂಜಿನಿಯರ್‌ಗಳ ವಿರುದ್ಧ ಕೊಣಾಜೆ ಪೊಲೀಸರು ಕ್ರಮಕ್ಕೆ ಹಿಂದೆ ಮುಂದೆ ನೋಡುತ್ತಿದ್ದು, ಜಿಲ್ಲಾಡಳಿತವು ಯಾರ ಮೇಲೆ ಕ್ರಮ ಕೈಗೊಳ್ಳುವುದೆಂಬ ಗೊಂದಲದಲ್ಲಿದೆ. ಹಡಗುಕಾಯ್ದಿರಿಸಿ

ಈ ಮಧ್ಯೆ ಸಂತ್ರಸ್ತ ಕುಟುಂಬಕ್ಕೆ ನಿವೇಶನ ನೀಡಲು ಜಿಲ್ಲಾಡಳಿತ ಮುಂದಾ ಗಿರುವ ಮಾಹಿತಿ ಲಭ್ಯವಾಗಿದೆ. ಆದರೆ ಅದು ನೀಡಿದ ಮೇಲೆಯೇ ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಆರಂಭದಲ್ಲಿ ಎಂಜಿನಿಯರ್‌ಗಳ ಮೂಲಕ ತನಿಖೆ ನಡೆಸಲು ಮುಂದಾಗಿ, ಅದು ಅಪೂರ್ಣಗೊಂಡ ಬಳಿಕ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಎನ್‌ಐಟಿಕೆ ತಜ್ಞರು ಸ್ಥಳ ಮಹಜರು ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಇದರಲ್ಲಿ ರಸ್ತೆ ನಿರ್ಮಾಣದ ನಿರ್ಲಕ್ಷ್ಯವೂ ಸಹಿತ ಮೂರು ಕಾರಣಗಳನ್ನು ನೀಡಿದೆ. ಈ ವರದಿ ಪೊಲೀಸ್ ಇಲಾಖೆಗೂ ಸಲ್ಲಿಕೆಯಾಗಿದ್ದರೂ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎನ್ನಲಾಗಿದೆ.

ಎನ್‌ಐಟಿಕೆ ತಜ್ಞರು 2026ರ ಜನವರಿ 13ರಂದು ಸ್ಥಳ ಮಹಜರು ಮಾಡಿ ಘಟನೆಗೆ ಕೆಲವು ಕಾರಣಗಳನ್ನು ಉಲ್ಲೇಖೀಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಭಾರೀ ಮತ್ತು ನಿರಂತರ ಮಳೆ, ಇಳಿಜಾರಿನ ತಳ ಭಾಗದಲ್ಲಿ ಮನೆ ನಿರ್ಮಾಣಕ್ಕಾಗಿ ಅಗೆದದ್ದು, ರಸ್ತೆ ನಿರ್ಮಾಣಕ್ಕಾಗಿ ಮಣ್ಣು ಅಗೆದಿರುವ ಕಾರಣದಿಂದಾಗಿ ಘಟನೆ ಸಂಭವಿಸಿದೆ ಎಂದು ವಿವರಿಸಲಾಗಿದೆ. ಇದರಲ್ಲಿ ಸ್ಥಳದ ದೃಶ್ಯ, ಸ್ಥಳೀಯರ ಮಾಹಿತಿ, ಕುಸಿತವಾಗಿರುವ ಜಾಗದ ಪರಿಶೀಲನೆ, ಮಣ್ಣಿನ ತೆರೆದಿರುವಿಕೆ (ಸಾಯಿಲ್ ಎಕ್ಸ್‌ಪೋಷರ್), ಅವಶೇಷಗಳ ಲಕ್ಷಣಗಳ ಪರಿ ಶೀಲನೆ, ಇತ್ತೀಚೆಗೆ ಜಾಗದಲ್ಲಿ ಮಾಡಲಾದ ಬದಲಾವಣೆ ಇತ್ಯಾದಿ ಪರಿಶೀಲಿಸಲಾಗಿದೆ.

ಇದರೊಂದಿಗೆ ಕುಸಿತವಾಗಿರುವ ಜಾಗ ಲ್ಯಾಟೈಟ್ ಮಣ್ಣನ್ನು ಹೊಂದಿರುವ ಕಡಿದಾದ ಸ್ವಾಭಾವಿಕ ಇಳಿಜಾರು ಪ್ರದೇಶವೆಂದು ಉಲ್ಲೇಖೀಸಿದೆ. ಮಾರ್ಗ ಮತ್ತು ಮನೆ ನಿರ್ಮಾಣ ಕ್ಕಾಗಿ ಅಗೆದಿರುವುದರಿಂದ ಇಳಿಜಾರಿನ ತಳಭಾಗಕ್ಕೆ ಅಡಚಣೆ ಉಂಟಾಗಿದೆ. ಸಮರ್ಪಕ ಮೇಲೆ ಮತ್ತು ಒಳಚರಂಡಿ ವ್ಯವಸ್ಥೆಯ ಕೊರತೆ, ಮಣ್ಣಿನ ದ್ರವ್ಯರಾಶಿಯು ಪರ್ಯಾಪ್ತತೆ (ಸ್ಯಾಚುರೇಷನ್) ಮತ್ತು ಮೃದುವಾಗುವ ಲಕ್ಷಣಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Vishwa News 24

Recent Posts

ಸರ್ಕಾರಿ ನೌಕರರ ಬಡ್ತಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ತಮಿಳುನಾಡು ಸರ್ಕಾರದಿಂದ ಮಹತ್ವದ ಆದೇಶ – vishwanews24

ಸರ್ಕಾರಿ ನೌಕರರ ಬಡ್ತಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ತಮಿಳುನಾಡು ಸರ್ಕಾರದಿಂದ ಮಹತ್ವದ ಆದೇಶ ಚೆನ್ನೈ,: ರಾಜ್ಯದ ಎಲ್ಲಾ ಸರ್ಕಾರಿ…

48 minutes ago

ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ – vishwanews24

ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ ಜೆರುಸಲೇಂ: ಫ್ಲೈದುಬೈ ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ…

51 minutes ago

ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ – vishwanews24

ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ…

59 minutes ago

ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ – vishwanews24

ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ 70…

1 hour ago

ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ – vishwanews24

ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ ಮೂಡುಬಿದಿರೆ : ಅ.11 ರಂದು…

1 hour ago

ಉಡುಪಿ: ಸರ್ಕಾರದ  ಗ್ಯಾರಂಟಿ ಯೋಜನೆಗಳ ಪ್ರಯೋಜನ ಬಿಜೆಪಿಯವರೂ ಪಡೆಯುತ್ತಿದ್ದಾರೆ : ಸುಧೀರ್ ಕುಮಾರ್ ಮರೋಳ್ಳಿ – vishwanews24

ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ‘ಸತ್ಯ ಮೇವ ಜಯತೆ’ ಬೃಹತ್ ಪ್ರತಿಭಟನಾ ಸಭೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ…

1 hour ago