Featured

ಮಂಜಿನಲ್ಲಿ ವಿಷ್ಣುವಿನ ವರಾಹಾವತಾರ ; ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತೀಯರಿಗೆ ಮೊದಲ ಬಹುಮಾನ..- Vishwanews24

ನಯೋರೋ : ಜಪಾನ್ ನ ನಯೋರೋದಲ್ಲಿ ನಡೆದ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್‌ಟಿಂಗ್‌ ಸ್ಪರ್ಧೆಯಲ್ಲಿ ಭಾರತೀಯರ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಭಾರತ ಮೂಲದ ರವಿ ಪ್ರಕಾಶ್‌, ಸುನೀಲ್‌ ಕುಮಾರ್‌ ಕುಶ್ವಾಹ ಮತ್ತು ರಜನೀಶ್‌ ವರ್ಮಾ ಮಂಜಿನಲ್ಲಿ ವಿಷ್ಣುವಿನ ವರಾಹಾವತಾರ ಕಲಾಕೃತಿ ಮಾಡಿದ್ದು, ಆ ಮೂಲಕ ಮೊದಲ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. .

ಫೆಬ್ರವರಿ 6-9ರಂದು ನಡೆದಿದ್ದ ಈ ಸ್ಪರ್ಧೆಯಲ್ಲಿ ಈ ಅಭ್ಯುದಯ ತಂಡದ ಸದಸ್ಯರಾಗಿರುವ ಮೂವರೂ ಮೈನಸ್‌ 25 ಡಿಗ್ರಿ ಉಷ್ಣಾಂಶದ ನಡುವೆ 4 ಮೀಟರ್‌ ಎತ್ತರದ ವರಾಹ ಮೂರ್ತಿ ನಿರ್ಮಿಸಿ ಮೊದಲ ಬಾರಿಗೆ ರಾಷ್ಟ್ರಕ್ಕೆ ಮೊದಲ ಬಹುಮಾನ ಸಿಗುವಂತೆ ಮಾಡಿ ದೇಶಕ್ಕೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಅಂದಹಾಗೆಯೇ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್‌ಟಿಂಗ್‌ ಕಾಂಪಿಟೀಷನ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ತಂಡ ಸಹ ಇದ್ದೇ ಆಗಿದೆ. ಇನ್ನು ಈ ಸ್ಪರ್ಧೆಯಲ್ಲಿ ರಷ್ಯಾ, ಥಾಯ್ ಲ್ಯಾಂಡ್, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಲಭಿಸಿದೆ.

Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

5 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

9 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

10 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

10 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

11 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

11 hours ago