ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ – vishwanews24

Featured, ಉಡುಪಿ

ಮಣಿಪಾಲ: ಕ್ಯು ಆರ್ ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ

ಮಣಿಪಾಲ: ಕಂಪೆನಿ ಕ್ಯು ಆರ್‌ಕೋಡ್ ಬಳಸದೆ ಮರ್ಚೆಂಟ್ ಕ್ಯು ಆರ್ ಕೋಡ್ ಬಳಸುವ ಮೂಲಕ ಪ್ರಯಾಣಿಕರ ಶುಲ್ಕವನ್ನು ಸಂಗ್ರಹಿಸಿ ಕಂಪೆನಿಗೆ 12 ಲಕ್ಷ ರೂ. ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಳ್ಳಿ ಗ್ರಾಮದಲ್ಲಿ ಕಂಪೆನಿ ನಡೆಸುತ್ತಿದ್ದ ದಿವ್ಯ ಯತೀನ್ ಶೆಟ್ಟಿ (39) ಅವರಿಗೆ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ಧಮೂರ್ತಿ ಜಿ., ಶಿವರಾಜ ನಾಯಕ್, ಸುದೀಪ್, ಜಿತೇಶ್ ಎಲ್. ಕಾಂಚನ್, ಎಂ.ಬಿ. ಅವಿನಾಶ್ ಹಾಗೂ ಮುತ್ತಣ್ಣ ಆದಿನವರ್ ಪ್ರಯಾಣಿಕರ ಹಣಪಡೆದು ಮೋಸ ಮಾಡಿದ್ದಾರೆ ಎಂದು ದೂರಲಾಗಿದೆ.

ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ , ಉಡುಪಿ, ಬೈಂದೂರು ಬರಪೀಡಿತ ತಾಲೂಕು : ರಾಜ್ಯ ಸರಕಾರ ಘೋಷಣೆ – vishwanews24

2026ರ ಎ.1ರಿಂದ ಕಂಪೆನಿಗೆ ಬರಬೇಕಾಗಿದ್ದ 12 ಲಕ್ಷ ರೂ. ಪ್ರಯಾಣಿಕರ ಶುಲ್ಕವನ್ನು ನೀಡದೆ ತಮ್ಮಲ್ಲೇ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಮಣಿಪಾಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply