ಮಣಿಪಾಲ :ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು – Vishwanews24
ಮಣಿಪಾಲ :ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು
ಮಣಿಪಾಲ: ಬೆಳ್ಳಂಬೆಳಗ್ಗೆ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಣಿಪಾಲದ ಲಕ್ಷ್ಮೀಂದ್ರನಗರದ ಬಳಿ ನಡೆದಿದೆ.
ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವ್ಯೆಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ.
ಮಳೆಯಿಂದ ರಸ್ತೆಯ ಬಲಭಾಗದಲ್ಲಿ ನೀರು ತುಂಬಿದ್ದು ಇದು ಕೂಡ ಅಪಘಾತ ಸಂಭವಿಸಲು ಕಾರಣವಿರಬಹುದು ಎನ್ನಲಾಗಿದೆ.
ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಡಿಕ್ಕಿಯ ರಭಸಕ್ಕೆ ಕಾರಿನ ಬೊನೆಟ್ ಹಾಗೂ ಬಂಪರ್ ಕಿತ್ತು ಹೋಗಿದೆ.
ಮಣಿಪಾಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
