ಮಣಿಪಾಲ : ನಡು ರಸ್ತೆಯಲ್ಲೇ ಜೋಡಿಗಳ ಅಸಭ್ಯ ವರ್ತನೆ ; ಸಾರ್ವಜನಿಕರ ಆಕ್ರೋಶ – vishwanews24
ಮಣಿಪಾಲ : ನಡು ರಸ್ತೆಯಲ್ಲೇ ಜೋಡಿಗಳ ಅಸಭ್ಯ ವರ್ತನೆ ; ಸ್ಥಳೀಯರಲ್ಲಿ ಆಕ್ರೋಶ – ವಿಡಿಯೋ ವೈರಲ್..!
ಉಡುಪಿ: ಉಡುಪಿಯ ಮಣಿಪಾಲ ನಗರದಲ್ಲಿ ತಡರಾತ್ರಿ ಯುವಕ-ಯುವತಿಯೊಬ್ಬರ ಅಸಭ್ಯ ವರ್ತನೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕ ರಸ್ತೆಯಲ್ಲೇ ಪ್ರಣಯ ಸಲ್ಲಾಪಕ್ಕೆ ಇಳಿದ ಜೋಡಿ, ಸುತ್ತಮುತ್ತಲಿನ ಜನರಲ್ಲಿ ಅಸಹಜ ಪರಿಸ್ಥಿತಿಯನ್ನು ಉಂಟುಮಾಡಿದ ಘಟನೆ ವರದಿಯಾಗಿದೆ.
ಸ್ಥಳೀಯರ ಪ್ರಕಾರ, ಜೋಡಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಕೆಲವರು ತರಾಟೆಗೆ ತೆಗೆದುಕೊಂಡರು. ವಿದೇಶಗಳಲ್ಲಿ ಕಾಣಿಸಿಕೊಳ್ಳುವ ರೀತಿಯ ವರ್ತನೆಯನ್ನು ಅನುಸರಿಸುತ್ತಿರುವಂತೆ ಕಂಡ ಈ ಘಟನೆ, ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.
ಇದನ್ನೂ ಓದಿ:
ಆನ್ಲೈನ್ ವಂಚನೆ : APK ಲಿಂಕ್ ಕ್ಲಿಕ್ ಮಾಡಿ 74,000 ರೂ ಕಳೆದುಕೊಂಡ ವ್ಯಕ್ತಿ – vishwanews24
ಮಣಿಪಾಲವು ಗುಣಮಟ್ಟದ ಶಿಕ್ಷಣಕ್ಕಾಗಿ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಮುಖ ವಿದ್ಯಾ ಕೇಂದ್ರವಾಗಿದೆ. ಹೈಟೆಕ್ ವಾತಾವರಣದ ಪರಿಣಾಮವಾಗಿ ಕೆಲ ಯುವಕರು ವಿದೇಶದಂತೆಯೇ ಸ್ವತಂತ್ರವಾಗಿ ವರ್ತಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ವಿಶೇಷವಾಗಿ ಹೊಸ ವರ್ಷ ಹಾಗೂ ವ್ಯಾಲೆಂಟೈನ್ ಡೇ ಸಂದರ್ಭಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡಬೇಕು, ಈ ರೀತಿಯ ಅಸಭ್ಯ ವರ್ತನೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಉಡುಪಿಗರು ಆಗ್ರಹಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:
