ಮಣಿಪಾಲ: ಹಾಡಹಗಲೇ ಆಸ್ಪತ್ರೆ ಮುಂಬಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ – vishwanews24
ಮಣಿಪಾಲ: ಹಾಡಹಗಲೇ ಆಸ್ಪತ್ರೆ ಮುಂಬಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ
ಮಣಿಪಾಲ : ಆಸ್ಪತ್ರೆ ಮುಂಬಾಗದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಹಾಡಹಗಲೇ ಕಳ್ಳತನ ಮಾಡಿ ಕಳ್ಳ ಪರಾರಿಯಾದ ಘಟನೆ ಮಣಿಪಾಲದ ಹೃದಯ ಭಾಗದಲ್ಲಿ ನಡೆದಿದೆ.
ಮಣಿಪಾಲ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊಬೈಲ್ ನಲ್ಲಿ ಮಾತನಾಡುವಂತೆ ನಟಿಸಿ ಬೈಕ್ ಮೇಲೆ ಕುಳಿತು ಅನಾಯಾಸವಾಗಿ ಹ್ಯಾಂಡ್ ಲಾಕ್ ಮುರಿದು ತನ್ನದೇ ಬೈಕ್ ಎಂಬಂತೆ ಚಲಾಯಿಸಿಕೊಂಡು ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ.
ವಿದ್ಯುತ್ ಶಾಕ್ ತಗುಲಿ ತಂದೆ ಮತ್ತು ಮಗ ಸ್ಥಳದಲ್ಲೇ ಸಾವು – vishwanews24
KA20J2276 ನೇ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಕಳ್ಳ ಎಗರಿಸಿದ್ದು ,ಘಟನೆಯ ಸಂಪೂರ್ಣ ದೃಶ್ಯ ಮಾಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
