ಮಣಿಪಾಲ : ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ಡಿಕ್ಕಿ ಹೊಡೆದ ಗ್ರಾನೈಟ್ ತುಂಬಿದ ಲಾರಿ ; ಹಲವು ವಾಹನಗಳು ಜಖಂ – vishwanews24
ಮಣಿಪಾಲ : ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ಡಿಕ್ಕಿ ಹೊಡೆದ ಗ್ರಾನೈಟ್ ತುಂಬಿದ ಲಾರಿ ; ಹಲವು ವಾಹನಗಳು ಜಖಂ
ಕಾರ್ಕಳ: ಎರಡು ಕಾರುಗಳ ನಡುವೆ ಅಪಘಾತ ; ಅಗ್ನಿ ಶಾಮಕ ದಳದಿಂದ ಕಾರಿನೊಳಗೆ ಸಿಲುಕಿದ ಚಾಲಕನ ರಕ್ಷಣೆ – vishwanews24
ಘಟನೆಯಿಂದ ಕೆಲಪರ್ಕಳದಲ್ಲಿ ಗಣಪತಿ ನಾಯಕ್ ಅವರ ಮಾಲಕತ್ವದ ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ನಾಲ್ಕೈದು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.
ಬೆಂಗಳೂರಿನಿಂದ ಗ್ರಾನೈಟ್ ತುಂಬಿಕೊಂಡು ಪರ್ಕಳದ ಹೆರ್ಗಾ ಕಡೆಗೆ ತೆರಳುತ್ತಿದ್ದ ಲಾರಿ ಕೆಳಪರ್ಕಳದ ಹಳೆ ಡಾಮರು ರಸ್ತೆಯ ಏರಿನ ಜಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಗೆ ನುಗ್ಗಿದೆ ಪರಿಣಾಮ ಹಲವು ದ್ವಿಚಕ್ರ ವಾಹನಗಳು ನುಜ್ಜುಗುಜ್ಜಾಗಿದ್ದು ಅಲ್ಲದೆ ಲಾರಿಯಲ್ಲಿದ್ದ ಗ್ರಾನೈನ್ ನೆಲಕ್ಕೆ ಬಿದ್ದಿದೆ. ಲಾರಿ ಹಿಮ್ಮುಖವಾಗಿ ಬರುತ್ತಿದ್ದಂತೆ ಗ್ಯಾರೇಜ್ ನಲ್ಲಿದ್ದವರು ಓಡಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಭಾಗದಲ್ಲಿ ಘನ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ, ಇಲ್ಲಿನ ಏರು ಪ್ರದೇಶ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಘನ ವಾಹನಗಳು ಹಿಮ್ಮುಖವಾಗಿ ಚಲಿಸಿ ಹೆಚ್ಚಿನ ಅವಘಡಗಳು ಈ ಹಿಂದೆಯೂ ಸಂಭವಿಸಿವೆ.
