ಮಣಿಪಾಲ : 3 ವರ್ಷದ ಹೆಣ್ಣು ಮಗುವಿನೊಂದಿಗೆ ತಾಯಿ ನಾಪತ್ತೆ – Vishwanews24

Featured, ಉಡುಪಿ

ಮಣಿಪಾಲ : 3 ವರ್ಷದ ಹೆಣ್ಣು ಮಗುವಿನೊಂದಿಗೆ ತಾಯಿ ನಾಪತ್ತೆ

ಮಣಿಪಾಲ : ಶಿವಳ್ಳಿ ಗ್ರಾಮದ ಸಂತೋಷ ನಗರದಲ್ಲಿ 3 ವರ್ಷದ ಹೆಣ್ಣು ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂಜುಬಾನು (27) ಮತ್ತು ಅವರ 3 ವರ್ಷದ ಹೆಣ್ಣು ಮಗು ಮೊಯಿರಾ ಫಿರ್ದೊಸ್‌ ರವರು ನಾಪತ್ತೆಯಾದವರು. ಶಿವಳ್ಳಿ ಗ್ರಾಮದ ಸಂತೋಷ ನಗರದಲ್ಲಿ ತಾವು ವಾಸಿಸುತ್ತಿರುವ ಅಂಜುಬಾನು ಅವರು ಫೆ.18 ರ ಬೆಳಿಗ್ಗೆ ಮನೆಗೆ ಬೀಗ ಹಾಕಿ ಹೊರಟು ಹೋಗಿದ್ದರು. ಆ ಬಳಿಕ ಫೆ.20, 23 ,24 ರಂದು ತನ್ನ ತಮ್ಮ ಸಲೀಮ್ ಅವರಿಗೆ ಕರೆ ಮಾಡಿ ನಾನು ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಈವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂಬುದಾಗಿ ಸಲೀಮ್ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಕಾಣೆಯ ಪ್ರಕರಣ ದಾಖಲಾಗಿರುತ್ತದೆ.

ನಾಳೆಯಿಂದ ಸರ್ಕಾರಿ ನೌಕರ ಮುಷ್ಕರ – ಮಧ್ಯಂತರ ವರದಿ ಪಡೆದು 7ನೇ ವೇತನ ಆಯೋಗ ಜಾರಿ : ಸಿಎಂ ಬೊಮ್ಮಾಯಿ  – Vishwanews24

Leave a Reply