ಮದುವೆಗೆ ಹುಡುಗ ಹುಡುಕಿ ಕೊಡುವುದಾಗಿ ನಂಬಿಸಿ ತಂಗಿಯಿಂದಲೇ ಅಕ್ಕನಿಗೆ ರೂ.16.59 ಲಕ್ಷ ವಂಚನೆ -Vishwanews24

Featured, ಉಡುಪಿ

ಮದುವೆಗೆ ಹುಡುಗ ಹುಡುಕಿ ಕೊಡುವುದಾಗಿ ನಂಬಿಸಿ ತಂಗಿಯಿಂದಲೇ ಅಕ್ಕನಿಗೆ ರೂ.16.59 ಲಕ್ಷ ವಂಚನೆ 

ಶಂಕರನಾರಾಯಣ: ಮದುವೆಗೆ ಹುಡುಗ ಹುಡುಕಿ ಕೊಡುವುದಾಗಿ ನಂಬಿಸಿ ತಂಗಿಯೇ ಅಕ್ಕನಿಂದ 16.59 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಪಡೆದು ವಂಚಿಸಿರುವ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರೋಜಾ ಎಂಬವರಿಗೆ ಅವರ ತಂಗಿ ಸವಿತಾ ಇವರು ಮದುವೆ ಆಗಲು ಹುಡುಗನನ್ನು ಹುಡುಕಿ ಕೊಡುವುದಾಗಿ ಹೇಳಿ ಆ ಬಳಿಕ ಆರೋಪಿತರಾದ ಸವಿತಾ, ಕಿರಣ್, ಶ್ರೀನಿವಾಸ ಎಂಬವರು ಸೇರಿ ಹುಡುಗನ ಕಡೆಯವರು ಎಂದು ಪದೇ ಪದೇ ಮೆಸೇಜ್ ಮಾಡಿ ನಂಬಿಸಿ ಅವರಿಂದ ಒಟ್ಟು ರೂ. 13,59,500 ಹಣ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ ಮದುವೆ ಸಮಯ ಧರಿಸಿ ವಾಪಾಸು ನೀಡುವುದಾಗಿ ಹೇಳಿ ಸುಮಾರು 3,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಪಡೆದು. ವಾಪಾಸು ನೀಡದೆ ಬ್ಯಾಂಕ್‌‌ನಲ್ಲಿ ಅಡವು ಇರಿಸಿರುತ್ತಾರೆ, ಹಣ ಹಾಗೂ ಚಿನ್ನವನ್ನು ವಾಪಾಸು ಕೇಳಿದ್ದಕ್ಕೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಸಂಜೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಸಿಎಂ ಬೊಮ್ಮಾಯಿ – Vishwanews24

Leave a Reply