ಮದುವೆ ಸಂಭ್ರಮದಲ್ಲಿ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ; ಮದುಮಗನ ಮನೆಗೆ ಕಲ್ಲು ತೂರಾಟ – Vishwanews24

Featured, ರಾಜ್ಯ ನ್ಯೂಸ್

ಮದುವೆ ಸಂಭ್ರಮದಲ್ಲಿ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ; ಮದುಮಗನ ಮನೆಗೆ ಕಲ್ಲು ತೂರಾಟ – Vishwanews24

ಕಾಸರಗೋಡು : ಮದುವೆ ಮನೆಯಲ್ಲಿ ತುಳುನಾಡಿನ ದೈವ ಕೊರಗಜ್ಜ ದೇವರಂತೆ ವೇಷಧರಿಸಿ, ವಿಟ್ಲ ಸಾಲೆತ್ತೂರಿನ ವಧುವಿನ ಮನೆಗೆ ತೆರಳಿದ ಆರೋಪ ಹೊತ್ತಿರುವ ಮಂಜೇಶ್ವರದ ಉಪ್ಪಳ ಬೇಕೂರಿನ ಉಮರುಲ್ ಬಾತೀಶ್ ಅವರ ಮನೆಗೆ ಕಲ್ಲು ತೂರಾಟ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿರುವ ಘಟನೆ ನಡೆದಿದೆ.

ಬೈಕ್ ಬಂದ ಕಿಡಿಗೇಡಿಗಳು  ವರನ ಮನೆಯ ಕಾಂಪೌಂಡ್ ಗೋಡೆಗೆ ಕೇಸರಿ ಬಣ್ಣ ಬಳಿದಿದ್ದಾರೆ ಎನ್ನಲಾಗಿದ್ದು, ಗಾಜು ಒಡೆದ ಸದ್ದು ಕೇಳಿ ಗಾಬರಿಯಿಂದ ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಇಬ್ಬರು  ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಈ ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ಉಮರುಲ್ ಬಾತೀಶ್ ಅವರ ಮನೆಗೆ ರಕ್ಷಣೆ ಒದಗಿಸಿದ್ದಾರೆ.

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡ ಕಾನ್‌ಸ್ಟೇಬಲ್‌ಗಳಿಂದ ಡ್ರಗ್ ವ್ಯಾಪಾರ: ಇಬ್ಬರ ಬಂಧನ – Vishwanews24

 

Leave a Reply