ಮಲ್ಪೆ : ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ತೆರಳದ ಪರ್ಸೀನ್ ಬೋಟುಗಳು -vishwanews24
ಮಲ್ಪೆ : ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ತೆರಳದ ಪರ್ಸೀನ್ ಬೋಟುಗಳು
ಮಲ್ಪೆ: ಕಳೆದ ಎರಡು ದಿನಗಳಿಂದ ಆಳಸಮುದ್ರದಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಆಳಸಮುದ್ರ ಬೋಟು ಹೊರತುಪಡಿಸಿ ಪರ್ಸೀನ್, ಸಣ್ಣ ಟ್ರಾಲ್ ಬೋಟುಗಳು ಮೀನುಗಾರಿಕೆಗೆ ತೆರಳಲಾಗದೆ ಬಂದರಿನಲ್ಲಿ ಲಂಗರು ಹಾಕಿವೆ. ಬಹುತೇಕ ಆಳಸಮುದ್ರ ಬೋಟುಗಳು ಮೀನುಗಾರಿಕೆ ನಡೆಸುತ್ತಿದ್ದು, ಮೀನುಗಾರಿಕೆ ನಡೆಸಲು ಸಾಧ್ಯವಾಗದ ಬೋಟುಗಳು ಸಮುದ್ರ ಮಧ್ಯೆ ಲಂಗರು ಹಾಕಿ ನಿಂತಿವೆ. ಮಂಗಳೂರು, ಮಲ್ಪೆ, ಗಂಗೊಳ್ಳಿ, ಭಟ್ಕಳ, ಕಾರವಾರ ಬಂದರುಗಳಲ್ಲಿ ಪರ್ಸೀನ್ ಬೋಟು ತೆರಳಲಿಲ್ಲ ಎನ್ನಲಾಗಿದೆ.
ಸಮುದ್ರದಲ್ಲಿ ಅಂತಹ ದೊಡ್ಡ ಮಟ್ಟದ ತೂಫಾನ್ ಆಗಿಲ್ಲ. ಅಮಾವಾಸ್ಯೆ ಬಳಿಕ ಹುಣ್ಣಿಮೆಯ ಎದುರಿಗೆ ಸಮುದ್ರದಲ್ಲಿ ವ್ಯತ್ಯಾಸ ಕಂಡು ಬರುವುದು ಸಹಜ, ಈ ರೀತಿ ಇರುವುದರಿಂದ ಪರ್ಸೀನ್ ಬೋಟುಗಳಿಂದ ಮೀನಿಗೆ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಪಸೀìನ್ ಬೋಟ್ಗಳು ಮೀನಿಗೆ ಹಾಕಿದ ಬಲೆ ಹರಿದಿದೆ. ಹಾಗಾಗಿ ಎಲ್ಲ ಬೋಟುಗಳು ಹಿಂದಿರುಗಿದ್ದು, ಒಂದೆರಡು ದಿನದಲ್ಲಿ ಸಮುದ್ರ ಸಹಜ ಸ್ಥಿತಿಗೆ ಬರಲಿದೆ ಎಂದು ಮಲ್ಪೆ ಪಸೀìನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ತಿಳಿಸಿದ್ದಾರೆ.
