ಮಲ್ಪೆ : ಕಡಲಿಗಿಳಿದ ಮೀನುಗಾರಿಕೆ ಬೋಟುಗಳು -vishwanews24
ಮಲ್ಪೆ : ಕಡಲಿಗಿಳಿದ ಮೀನುಗಾರಿಕೆ ಬೋಟುಗಳು
ಮಲ್ಪೆ: ಸಮುದ್ರ ಸಹಜ ಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ತಮಿಳುನಾಡಿನ ಮೀನುಗಾರ ಕಾರ್ಮಿಕರು ಇರುವ ಸುಮಾರು 15ರಷ್ಟು ಆಳಸಮುದ್ರ ದೋಣಿಗಳು ಮೀನುಗಾರಿಕೆ ತೆರಳಿವೆ.
ಮೀನುಗಾರಿಕೆ ಋತು ಆರಂಭವಾಗಿದ್ದರೂ ಚಂಡಮಾರುತದ ಮುನ್ನೆಚ್ಚರಿಕೆ ಹವಾಮಾನ ಇಲಾಖೆ ನೀಡಿದ ಹಿನ್ನೆಲೆಯಲ್ಲಿ ಯಾವುದೇ ಬೋಟುಗಳು ಕಡಲಿಗಿಳಿದಿಲ್ಲ.
ಇದೀಗ ಕಡಲು ಸಹಜ ಸ್ಥಿತಿಗೆ ಬಂದಿದ್ದು, ಮುಂದಿನ ಒಂದು ವಾರದೊಳಗೆ ಬಹುತೇಕ ಎಲ್ಲ ದೋಣಿಗಳು ಕಡಲಿಗಿಳಿಯುವ ಸಾಧ್ಯತೆ ಇದೆ ಎಂದು ಆಳಸಮುದ್ರ ಟ್ರಾಲ್ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಕರುಣಾಕರ ಸಾಲ್ಯಾನ್ ತಿಳಿಸಿದ್ದಾರೆ.
