ಮಲ್ಪೆ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌: ಮುಳುಗುತ್ತಿದ್ದ ಇಬ್ಬರ ರಕ್ಷಣೆ – Vishwanews24

Featured, ಉಡುಪಿ

ಮಲ್ಪೆ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌: ಮುಳುಗುತ್ತಿದ್ದ ಇಬ್ಬರ ರಕ್ಷಣೆ

ಉಡುಪಿ: ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ನೀರಿಗೆ ಇಳಿದು ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯ ಸಿಬಂದಿ ರಕ್ಷಿಸಿರುವ ಘಟನೆ ನಡೆದಿದೆ.

ಬೆಂಗಳೂರು ಮೂಲದವರೆನ್ನಲಾದ ಇಬ್ಬರು ಯುವಕರು ಮತ್ತು ಮೂವರು ಯುವತಿಯರು ಸೇರಿದಂತೆ ಒಟ್ಟು 5 ಮಂದಿ ನೀರಿಗೆ ಇಳಿದಿದ್ದು, ಇಬ್ಬರು ಯುವಕರು ನೀರಿನಲ್ಲಿ ಈಜಲು ಮುಂದಾಗಿದ್ದರು. ಈಜುತ್ತಾ ಮುಂದೆ ಹೋದ ಅವರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು.

ಮಂಗಳೂರು : ಜೆರೋಸಾ ಶಾಲಾ ಶಿಕ್ಷಕಿಯ ಧರ್ಮದ ಅವಹೇಳನ ಪ್ರಕರಣ –  ವಿಎಚ್ ಪಿ, ಬಜರಂಗದಳದಿಂದ ಪ್ರತಿಭಟನೆ: ಹಲವರು ಪೊಲೀಸ್ ವಶಕ್ಕೆ – Vishwanews24

ಇನ್ನು ಈ ಸಂದರ್ಭದಲ್ಲಿ ಅವರ ಬೊಬ್ಬೆ ಕೇಳಿ ಸ್ಥಳೀಯ ಸೀಬರ್ಡ್‌ ಮತ್ತು ಡೆಲ್ಟಾ ಬೋಟ್‌ ಹಾಗೂ ವಾಟರ್‌ ಸ್ಪೋರ್ಟ್ಸ್ ಬೋಟುಗಳ ಸಿಬಂದಿ ವಿವೇಕ್‌ ಪುತ್ರನ್‌, ರಮೇಶ್‌ ಬಂಗೇರ, ಕೃಷ್ಣ ಅವರು ತಕ್ಷಣ ಧಾವಿಸಿ ಬಂದರು ಬೋಟಿನ ಸಹಾಯದಿಂದ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ.

Leave a Reply