ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಂಗಳೂರಿನಲ್ಲಿ ಮುಳುಗಡೆ : 10 ಮಂದಿ ಮೀನುಗಾರರ ರಕ್ಷಣೆ – Vishwanews24
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಂಗಳೂರಿನಲ್ಲಿ ಮುಳುಗಡೆ : 10 ಮಂದಿ ಮೀನುಗಾರರ ರಕ್ಷಣೆ
ಮಲ್ಪೆ,: ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಅಳಸಮುದ್ರ ಬೋಟ್ ಮಂಗಳೂರು ಸಮೀಪ ಸಮುದ್ರ ಮಧ್ಯೆ ಮುಳುಗಡೆಗೊಂಡಿದ್ದು ಬೋಟಿನಲ್ಲಿದ್ದ 10 ಮಂದಿ ತಮಿಳುನಾಡಿನ ಮೀನುಗಾರರನ್ನು ರಕ್ಷಿಸಲಾಗಿದೆ.
ಮೀನುಗಾರಿಕೆ ಮಾಡುತ್ತಿರುವಾಗ ಸಂದರ್ಭ ಜೋರಾದ ಗಾಳಿ ಮಳೆ ಸುರಿದಿದ್ದು ಇದರ ಪರಿಣಾಮ ಬೋಟಿನ ಎಂಜಿನ್ ರೂಮಿಗೆ ನೀರು ತುಂಬಿ ಎಂಜಿನ್ ಕೆಟ್ಟು ಹೋಗಿ ಎಂಜಿನ್ ರೂಮಿಗೆ ನೀರು ತುಂಬಿ ಎಂಜಿನ್ ಕೆಟ್ಟು ಹೋಯಿತ್ತೆಂದು ಹೇಳಲಾಗಿದೆ. ಹಿಜಬ್ ವಿವಾದ : ಇಂದು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆ – Vishwanews24
ಆ.17ರಂದು ಸಂಜೆ ಮಲ್ಪೆ ಬಂದರಿನಿಂದ ಮಹೇಶ್ ಕುಂದರ್ ಎಂಬವರಿಗೆ ಸೇರಿದ ಮಕರಧ್ವಜ ಹೆಸರಿನ ಆಳಸಮುದ್ರ ಬೋಟು ಆ.17ರಂದು ಸಂಜೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿತ್ತು. ಆ.23ರಂದು ಸಂಜೆ ಮಂಗಳೂರಿನಿಂದ ನೇರ 11 ನಾಟಿಕಲ್ ಮೈಲು ಆಳ ದೂರದಲ್ಲಿ ಮೀನುಗಾರಿಗೆ ನಡೆಸುತ್ತಿರುವಾಗ ಈ ಅವಘಡ ಸಂಭವಿಸಿದೆ. ತಕ್ಷಣವೇ ಸಮೀಪದಲ್ಲಿದ್ದ ಮಾನ್ವಿ ತನ್ವಿತ್ ಎಂಬ ಹೆಸರಿನ ಬೋಟಿನವರು ಮುಳುಗಡೆ ಆಗುತ್ತಿದ್ದ ಬೋಟಿನಲ್ಲಿದ್ದ ಮೀನುಗಾರರನ್ನು ರಕ್ಷಿಸಿದರು. ತೆಕ್ಕಟ್ಟೆ: ಚಲಿಸುತ್ತಿದ್ದ ಖಾಸಗಿ ಬಸ್ಸಿನ ಟಯರ್ ಬ್ಲಾಸ್ಟ್ – ಚಾಲಕನ ಸಮಯ ಪ್ರಜ್ಞೆದಿಂದ ತಪ್ಪಿದ ಭಾರೀ ದುರಂತ – Vishwanews24
ಮುಳುಗಡೆಯಾದ ಬೋಟಿನಲ್ಲಿದ್ದ ಹಿಡಿದ ಮೀನು, ಬಲೆ, ಎಂಜಿನ್ ಸೇರಿ ಸುಮಾರು 60 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ
