Featured

ಮಲ್ಪೆ : ಬೋಟ್‌ನಲ್ಲಿ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ – vishwanews24

ಮಲ್ಪೆ : ಬೋಟ್‌ನಲ್ಲಿ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಬೋಟ್‌ನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಯುವಕನೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳವಾರ ಮಲ್ಪೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆಗಸ್ಟ್ 24ರಂದು ರಾತ್ರಿ ಬೋಟ್‌ನಲ್ಲಿ ಮೀನುಗಾರ ಕಾರ್ಮಿಕರಾದ ಗೋವಿಂದ ಹಾಗೂ ಅಭಿಷೇಕ್ ನಡುವೆ ತೀವ್ರ ಗಲಾಟೆ ನಡೆದಿದೆ. ಜಗಳದ ಮುಂದುವರಿದ ಭಾಗವಾಗಿ, ಆಗಸ್ಟ್ 25ರಂದು ಬೆಳಗ್ಗೆ ಜಾವ ಗೋವಿಂದ ಎಂಬಾತ ಅಭಿಷೇಕ್‌ನನ್ನು ಕೊಲೆ ಮಾಡಿ ಸ್ಥಳದಿಂದ ಓಡಿ ಹೋಗಿದ್ದ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಮಲ್ಪೆ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾದ ಅನೀಲ್ ಕುಮಾರ್ ಡಿ. ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. ಆದರ್ಶ ಮತ್ತು ಪಿಸಿ ಕುಬೇರ ಅವರು ಆರೋಪಿಯ ಪತ್ತೆಗಾಗಿ ಉಡುಪಿಗೆ ಧಾವಿಸಿದ್ದಾರೆ. ಈ ವೇಳೆ ಮುಂಬೈ ಅಥವಾ ಹೈದರಾಬಾದ್‌ಗೆ ಪರಾರಿಯಾಗುವ ಉದ್ದೇಶದಿಂದ ಉಡುಪಿ ರೈಲ್ವೆ ನಿಲ್ದಾಣದತ್ತ ತೆರಳುತ್ತಿದ್ದ ಆರೋಪಿ ಗೋವಿಂದನನ್ನು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.

ಬಂಧಿತ ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ಹೋಗದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2026ರಂತೆ BNS ಸೆಕ್ಷನ್ 103 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Vishwa News 24

Recent Posts

ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಶೀಘ್ರವೇ ಆರಂಭಿಸಿ : ಕರವೇ ಆಗ್ರಹ – vishwanews24

ನೂತನ ಜಿಲ್ಲಾಸ್ಪತ್ರೆಯನ್ನು ಶೀಘ್ರವೇ ಆರಂಭಿಸಿ : ಕರವೇ ಆಗ್ರಹ ಸೆ.30ರೊಳಗೆ ಆಸ್ಪತ್ರೆಯ ಸೇವೆ ಆರಂಭಿಸದಿದ್ದರೆ ಅ.1ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯ ಎಚ್ಚರಿಕೆ…

23 minutes ago

ಮಂಗಳೂರಿಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್ ; ಧರ್ಮಸ್ಥಳಕ್ಕೆ ಭೇಟಿ – vishwanews24

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಹಿನ್ನೆಲೆ: ಮಂಗಳೂರಿಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್ ; ಧರ್ಮಸ್ಥಳಕ್ಕೆ ಭೇಟಿ ಮಂಗಳೂರು: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್…

34 minutes ago

ಉಡುಪಿ: ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳು ಪತ್ತೆ – vishwanews24

ಉಡುಪಿ: ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳು ಪತ್ತೆ ಉಡುಪಿ: ಹಿಂದಿನ ಮತದಾರರ ಪಟ್ಟಿಯೊಂದಿಗೆ ಮತದಾರರ ವಿವರಗಳನ್ನು ಜೋಡಿಸಲು ಸಾಧ್ಯವಾಗದ…

47 minutes ago

ವಿಷಕಾರಿ ದತ್ತೂರ ಬೀಜ ಮಾರಾಟ : ಅಮೆಜಾನ್,ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ನ ಆಹಾರ ಪರವಾನಗಿ ಅಮಾನತು – vishwanews24

ವಿಷಕಾರಿ ದತ್ತೂರ ಬೀಜ ಮಾರಾಟ : ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಆಹಾರ ಪರವಾನಗಿ ಅಮಾನತು ಬೆಂಗಳೂರು: ವಿಷಕಾರಿ ದತ್ತೂರ ಬೀಜಗಳನ್ನು…

57 minutes ago

ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್  – vishwanews24

ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್  ಉಡುಪಿ: ಉದ್ಯಮಿ…

1 hour ago

ಮಂತ್ರಾಲಯ: ಆ. 27ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಮಹೋತ್ಸವ – viswhanews24

ಮಂತ್ರಾಲಯ: ಆ. 27ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಮಹೋತ್ಸವ ಆ.27ರಂದು ಧ್ವಜಾರೋಹಣ, ಗೋ ಅಶ್ವಪೂಜೆ ನೆರವೇರಿಸುವ ಮೂಲಕ ಆರಾಧನೆಗೆ…

2 hours ago