ಬೆಂಗಳೂರು: ವಿಷಕಾರಿ ದತ್ತೂರ ಬೀಜಗಳನ್ನು ಆಹಾರ ಉತ್ಪನ್ನಗಳಾಗಿ ಮಾರಾಟ ಮಾಡುತ್ತಿದ್ದ ಇ-ಕಾಮರ್ಸ್ ಜಾಲತಾಣಗಳ ಆಹಾರ ಪರವಾನಗಿ ಅಮಾನತು ಮಾಡಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆದೇಶ ಮಾಡಿದೆ.
Amazon, Swiggy Instamart, ಜಾಲತಾಣಗಳ ಆಹಾರ ಪರವಾನಗಿ ಅಮಾನತು ಮಾಡಲಾಗಿದೆ. ಬೀಜಗಳ ಮಾರಾಟ, ವಿತರಣೆ, ಪ್ರಚಾರವನ್ನು ಮಾಡಿದ್ದಕ್ಕೆ ಈ ಕ್ರಮಕೈಗೊಳ್ಳಲಾಗಿದೆ.
ಇದನ್ನೂ ಓದಿ:
ಹೊಕೋಟೆಯ ಇ-ಕಾಮರ್ಸ್ ವೇರ್ ಹೌಸ್‌ಗಳಲ್ಲಿ ಪರಿಶೀಲನೆ ನಡೆಸಿದಾಗ ದತ್ತೂರ ಬೀಜಗಳು ಪತ್ತೆಯಾಗಿದ್ದವು. ಇದರಿಂದ ಎಚ್ಚೆತ್ತ ಇಲಾಖೆ ಆಹಾರ ಪರವಾನಗಿ ಅಮಾನತು ಮಾಡಿದೆ.
ದತ್ತೂರ ಬೀಜಗಳು ವಿಷಕಾರಿಯಾಗಿದ್ದು, ಅದರ ಸೇವನೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಅಪಾಯ ಉಂಟಾಗುತ್ತದೆ ಎಂದು ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ ಈ ಮೂರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ದತ್ತೂರ ಬೀಜದ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ನಿರ್ದೇಶಿಸಿದೆ. ಜೊತೆಗೆ ಆಹಾರ ಉತ್ಪನ್ನಗಳ ಮಾರಾಟ, ವಿತರಣೆ ಮತ್ತು ಪ್ರದರ್ಶನವನ್ನು ನಿಲ್ಲಿಸಲು ಸಹ ಆದೇಶಿಸಲಾಗಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳು ಅನುಸರಣಾ ವರದಿಗಳನ್ನು ತಕ್ಷಣವೇ ಸಲ್ಲಿಸಬೇಕು. ನಂತರ ಅಮಾನತು ರದ್ದು ಮಾಡುವ ಬಗ್ಗೆ ಪ್ರತ್ಯೇಕ ಆದೇಶವನ್ನು ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ:
ಆ.24 ರಂದು ಮೂರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳು ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ವೇಳೆ ಯಾರೂ ಯಾವುದೇ ದಾಖಲೆಗಳನ್ನು ಒದಗಿಸಲಿಲ್ಲ. ದಾಖಲೆಗಳ ಸಲ್ಲಿಕೆಗೆ ಹೆಚ್ಚುವರಿ ಸಮಯವನ್ನು ಕೋರಲಾಗಿದೆ. ಇದರ ನಡುವೆ ದತ್ತೂರ ಹಣ್ಣುಗಳು ಮತ್ತು ಬೀಜಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಬಿಗ್‌ಬಾಸ್ಕೆಟ್ ಎಫ್‌ಡಿಎಗೆ ತಿಳಿಸಿತು. ಮುಂದೆ ಮಾರಾಟದ ವಿಧಾನವನ್ನು ಸರಿಪಡಿಸಿ ‘ಮಾನವ ಬಳಕೆಗಾಗಿ ಅಲ್ಲ’ ಎಂದು ಉಲ್ಲೇಖಿಸಲಾಗುವುದು ಎಂದು ಮನವಿ ಮಾಡಿದೆ. ಈ ಮನವಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ
‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಹಿನ್ನೆಲೆ: ಮಂಗಳೂರಿಗೆ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್ ; ಧರ್ಮಸ್ಥಳಕ್ಕೆ ಭೇಟಿ ಮಂಗಳೂರು: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್…
ಉಡುಪಿ: ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸಗಳು ಪತ್ತೆ ಉಡುಪಿ: ಹಿಂದಿನ ಮತದಾರರ ಪಟ್ಟಿಯೊಂದಿಗೆ ಮತದಾರರ ವಿವರಗಳನ್ನು ಜೋಡಿಸಲು ಸಾಧ್ಯವಾಗದ…
ಉಡುಪಿ: ಡೇವಿಡ್ ಡಿಸೋಜಾ ಶೂಟೌಟ್ ಪ್ರಕರಣ ; ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಇನ್ನೂ ಪತ್ತೆಯಾಗಿಲ್ಲ: ಹರಿರಾಮ್ ಶಂಕರ್ ಉಡುಪಿ: ಉದ್ಯಮಿ…
ಮಂತ್ರಾಲಯ: ಆ. 27ರಿಂದ ಸೆ.2ರವರೆಗೆ ರಾಯರ 355ನೇ ಆರಾಧನಾ ಮಹೋತ್ಸವ ಆ.27ರಂದು ಧ್ವಜಾರೋಹಣ, ಗೋ ಅಶ್ವಪೂಜೆ ನೆರವೇರಿಸುವ ಮೂಲಕ ಆರಾಧನೆಗೆ…
ಭಾರೀ ಮಳೆ ಮುನ್ಸೂಚನೆ : ಕರಾವಳಿ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ…
ಮಲ್ಪೆ : ಬೋಟ್‌ನಲ್ಲಿ ಮೀನುಗಾರ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು…