ಮಲ್ಪೆ: ರಸ್ತೆ ಬದಿಯ ಹಸಿ ಅಣಬೆ ತಿಂದು ಮೂವರು ಆಸ್ವಸ್ಥ ; ಪ್ರಾಣಾಪಾಯದಿಂದ ಪಾರು – vishwanews24

Featured, ಉಡುಪಿ

ಮಲ್ಪೆ: ರಸ್ತೆ ಬದಿಯ ಹಸಿ ಅಣಬೆತಿಂದು ಮೂವರು ಆಸ್ವಸ್ಥ ; ಪ್ರಾಣಾಪಾಯದಿಂದ ಪಾರು

ಮಲ್ಪೆ: ರಸ್ತೆ ಬದಿಯಲ್ಲಿ ಬೆಳೆದ ಅಣಬೆ ತಿಂದು ಮೂವರು ಅಸ್ವಸ್ಥಗೊಂಡ ಘಟನೆ ಮಲ್ಪೆ ಸಮೀಪದ ತೊಟ್ಟಂನಲ್ಲಿ ಸಂಭವಿಸಿದೆ.

ಗದಗ ಮೂಲದ ಅಣ್ಣಪ್ಪ (45), ಸುಜಾತಾ (25) ಮತ್ತು ಸಂಗೀತಾ (7) ಅಸ್ವಸ್ಥರಾದವರು.

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು; ನಾಲ್ವರಿಗೆ ಗಾಯ – vishwanews24

ಅವರು ಮಲ್ಪೆ ಸಮೀಪದ ತೊಟ್ಟಂನಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದು ಕೆಲಸ ಮುಗಿಸಿ ಮನೆಗೆ ತೆರಳುವಾಗ ರಸ್ತೆ ಬದಿಯಲ್ಲಿ ಬೆಳೆದಿದ್ದ ಅಣಬೆಯನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಹಸಿಯಾಗಿಯೇ ಹಂಚಿಕೊಂಡು ತಿಂದಿದ್ದಾರೆ. ಬಳಿಕ ಮೂವರೂ ತೀವ್ರ ಅಸ್ವಸ್ಥಗೊಂಡ ಕಾರಣ ಮನೆಯ ಇತರರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆ ತಂದರು.

ವಿಷಯ ತಿಳಿದ ಸಮಾಜ ಸೇವಕ ಈಶ್ವರ್‌ ಮಲ್ಪೆ ಮತ್ತು ತಂಡ ತತ್‌ಕ್ಷಣ ಸ್ಥಳಕ್ಕೆ ತೆರಳಿ ಆ್ಯಂಬುಲೆನ್ಸ್‌ ಮೂಲಕ ಮೂವರನ್ನೂ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಪು : ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ – vishwanews24

Leave a Reply