ಮಳೆಯೊಂದಿಗೆ ಗೆಜ್ಜೆಗಿರಿ ಪ್ರವೇಶಿಸಿದ ಕೋಟಿ ಚೆನ್ನಯರು…ಪಾವನವಾಯಿತು ಶ್ರೀ ಕ್ಷೇತ್ರ -Vishwanews24

Featured, ದಕ್ಷಿಣ ಕನ್ನಡ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಭಾರೀ ಪ್ರಮಾಣದ ಅಕಾಲಿಕ ಮಳೆಯಾಗಿದೆ.

ಕೋಟಿ ಚೆನ್ನಯರ ಮೂಲ ಸ್ಥಾನವಾದ ಪುತ್ತೂರಿನ ಗೆಜ್ಜೆಗಿರಿ ನಂದನಬಿತ್ತಲ್’ನಲ್ಲಿ ಮಹಾಮಾತೆ ದೇಯಿ ಬೈದ್ಯೆತಿ ಮತ್ತು ಅವಳಿ ವೀರರ ಮೂಲಸ್ಥಾನ ಕ್ಷೇತ್ರದ ಬ್ರಹ್ಮಕಲಶೋತ್ಸವ ಕೂಡ ವೈಭವದಿಂದ ನಡೆಯುತ್ತಿದ್ದು, ಇದೇ ವೇಳೆ ಮಳೆರಾಯ ಇಳೆಗೆ ತಂಪೆರೆದಿದ್ದಾನೆ.

ಎಂದೂ ಕಾಣದ ಮಳೆ ಇಂದು ಮುಂಜಾನೆ ಇದ್ದಕಿದ್ದಂತೆ  ಕಾಣಿಸಿಕೊಂಡು ಪುತ್ತೂರಿನ ಗೆಜ್ಜೆಗಿರಿ ನಂದನ ಬಿತ್ತಿಲ್ ಪರಮ ಪಾವನ ಕ್ಷೇತ್ರ ಎಂದು ಸಾಬೀತು ಪಡಿಸಿದೆ..

ಜಿಲ್ಲೆಯಲ್ಲಿ ಕಳೆದ 2-3 ದಿನಗಳಿಂದ ಬಿಸಿಲಿನ ತಾಪ ತೀವ್ರಗತಿಯಲ್ಲಿ ಏರಿತ್ತು. ಪರಿಣಾಮವಾಗಿ ಜನ-ಜಾನುವಾರುಗಳು, ಪ್ರಾಣಿ-ಪಕ್ಷಿಗಳು, ತಾಪ ತಾಳದೆ ನೀರು ನೆರಳನ್ನರಸುವಂತಾಗಿತ್ತು. ಆದರೆ ಇಂದು ಮುಂಜಾನೆ ವೇಳೆ ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಗಾಳಿ ಬೀಸತೊಡಗಿದೆ. ಇದ್ದಕ್ಕಿದ್ದಂತೆ ಗುಡುಗು ಸಹಿತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು.