Featured

ಮಹೇಶ್ ಶೆಟ್ಟಿ  ತಿಮರೋಡಿ ಜಿಲ್ಲೆಯಿಂದ ಗಡಿಪಾರಿಗೆ ಆದೇಶ  – vishwanews24

ಮಹೇಶ್ ಶೆಟ್ಟಿ  ತಿಮರೋಡಿ ಜಿಲ್ಲೆಯಿಂದ ಗಡಿಪಾರಿಗೆ ಆದೇಶ

ಬೆಳ್ತಂಗಡಿ: ಜಿಲ್ಲಾ ವ್ಯಾಪ್ತಿಯಲ್ಲಿ 32ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಿಂದ ಗಡಿಪಾರು ಮಾಡಲು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಬೆಳ್ತಂಗಡಿ ಪೊಲೀಸರು ತಿಮರೋಡಿ ವಿರುದ್ಧ ದಾಖಲಾದ ಪ್ರಕರಣಗಳ ವಿವರಗಳನ್ನು ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗಿಸ್ ಅವರಿಗೆ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ ಬಳಿಕ, ಸೆಪ್ಟೆಂಬರ್ 18ರಂದು ಸಹಾಯಕ ಆಯುಕ್ತರು ಗಡಿಪಾರು ಆದೇಶ ಹೊರಡಿಸಿದ್ದಾರೆ.

ಅದರಂತೆ, ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ವಾಸಿಸುವಂತೆ ಸೂಚಿಸಲಾಗಿದೆ. ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಅವರಿಗೆ ಆದೇಶದ ಪ್ರತಿ ತಲುಪಿದ್ದು, ಶೀಘ್ರದಲ್ಲೇ ಗಡಿಪಾರು ಪ್ರಕ್ರಿಯೆ ಜಾರಿಗೆ ಬರಲಿದೆ.

Vishwa News 24

Recent Posts

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ – vishwanews24

ಮಂಗಳೂರು: ಮೊಟ್ಟೆ ಸಾಗಣೆ ವಾಹನದಲ್ಲಿ ಅಕ್ರಮ ಜಾನುವಾರು ಸಾಗಟ ; ಇಬ್ಬರು ಬಂಧನ ಮಂಗಳೂರು: ನಗರದ ಪಂಪ್‌ವೆಲ್ ಬಳಿ ಮೊಟ್ಟೆ…

20 hours ago

ಚಿಕಿತ್ಸೆಗೂ ಮುನ್ನವೇ ವೆಚ್ಚದ ಮಾಹಿತಿ ಕಡ್ಡಾಯ :ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ – vishwnaews24

ಚಿಕಿತ್ಸೆಗೂ ಮುನ್ನವೇ ವೆಚ್ಚದ ಮಾಹಿತಿ ಕಡ್ಡಾಯ :ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ…

21 hours ago

ಶಬರಿಮಲೆಯಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆ ಆರಂಭ ; ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಭಕ್ತರು -vishwanews24

ಶಬರಿಮಲೆಯಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆ ಆರಂಭ ; ಅಯ್ಯಪ್ಪನ ದರ್ಶನ ಪಡೆದ ಸಾವಿರಾರು ಭಕ್ತರು ಶಬರಿಮಲೆ : ಪವಿತ್ರ ಕ್ಷೇತ್ರ ಶಬರಿಮಲೆ…

22 hours ago

ಬೈಕಂಪಾಡಿ : ಅನೈರ್ಮಲ್ಯ ಕಾರಣ; ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಬೀಗ – vishwanews24

ಬೈಕಂಪಾಡಿ : ಅನೈರ್ಮಲ್ಯ ಕಾರಣ; ಚೀಸ್ ಬಾಲ್ ಸ್ನಾಕ್ಸ್ ತಯಾರಿಕಾ ಘಟಕಕ್ಕೆ ಬೀಗ ಸುರತ್ಕಲ್:‌ ಸುರತ್ಕಲ್‌ ವ್ಯಾಪ್ತಿಯಲ್ಲಿ ದ.ಕ. ಜಿಲ್ಲಾ…

22 hours ago

ಮಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ದುರಂತ ; 236 ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಮಂಗಳೂರು :ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ.. ಟೇಕ್ ಆಫ್ ವೇಳೆ ಇಂಜಿನ್‌ನಲ್ಲಿ ದೋಷ .. 236 ಪ್ರಯಾಣಿಕರು ಅಪಾಯದಿಂದ…

22 hours ago

ಕಾಪು ಹೊಸ ಮಾರಿಗುಡಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಭೇಟಿ : ವಿಶ್ವ ನ್ಯೂಸ್24

**ಕಾಪು ಹೊಸ ಮಾರಿಗುಡಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಸಮೇತ ಭೇಟಿ** ಕಾಪು: ಕೇಂದ್ರ ಉಕ್ಕು ಮತ್ತು ಬೃಹತ್…

2 days ago