ಮಾರ್ಚ್ 13 ರಂದು ಹಿಂದೂ ಯುವಸೇನೆ ಭೈರಂಪಳ್ಳಿ ಘಟಕ ಉದ್ಘಾಟನೆ – Vishwanews24

Featured, ಉಡುಪಿ

ಮಾರ್ಚ್ 13 ರಂದು ಹಿಂದೂ ಯುವಸೇನೆ ಭೈರಂಪಳ್ಳಿ ಘಟಕ ಉದ್ಘಾಟನೆ – Vishwanews24

ಹಿಂದೂ ಯುವ ಸೇವೆ ಸೇನೆ ಭೈರಂಪಳ್ಳಿ ಘಟಕದ ಉದ್ಘಾಟನಾ ಸಮಾರಂಭ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ದಿನಾಂಕ ಮಾರ್ಚ್ 13 ಆದಿತ್ಯವಾರ ಪೂರ್ವಾಹ್ನ 11 ಗಂಟೆಗೆ ಶ್ರೀ ಶೀರೂರು ಮೂಲ ಮಠದ ಶ್ರೀ ವಿಠಲ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಜರಗಲಿರುವುದಾಗಿ ಘಟಕದ ಅಧ್ಯಕ್ಷರಾದ ಶ್ರೀ ಸದಾಶಿವ ಸಾಲ್ಯಾನ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕಾಣಿಯೂರು ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರು ಆಶೀರ್ವಚಿಸಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ನೂತನ ಘಟಕವನ್ನು ಉದ್ಘಾಟಿಸಲಿದ್ದಾರೆ.

ಚೈತ್ರ ಕುಂದಾಪುರ ಧಾರ್ಮಿಕ ಉಪನ್ಯಾಸ ನೀಡಲಿದ್ದು , ಮುಖ್ಯ ಅತಿಥಿಗಳಾಗಿ ಶೀರೂರು ಮಠದ ದಿವಾನರಾದ ಡಾ| ಉದಯ ಕುಮಾರ್ ಸರಳತ್ತಾಯ, ಭೈರಂಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಿಯಾನಂದ ಹೆಗ್ಡೆ, ವಿಶ್ವ ಹಿಂದೂ ಪರಿಷತ್ ಪೆರ್ಡೂರು ಗೌರವಾಧ್ಯಕ್ಷರಾದ ಬಿ. ಎನ್. ರಾಮಚಂದ್ರ ಕುಂಜಿತ್ತಾಯ, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷರಾದ ಭಾಸ್ಕರಚಂದ್ರ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ವಿಶ್ವಸ್ಥ ಮಂಡಳಿ ಸದಸ್ಯರಾದ ಶ್ರೀ ಪ್ರೇಮಾನಂದ ಶೆಟ್ಟಿ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷರಾದ ಮಂಜು ಕೊಳ, ಹಿಂದೂ ಜಾಗರಣಾ ವೇದಿಕೆ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಹಿಂದೂ ಯುವಸೇನೆ ಭೈರಂಪಳ್ಳಿ ಘಟಕದ ಗೌರವಾಧ್ಯಕ್ಷರಾದ ಶ್ರೀ ಪುಂಡಲೀಕ ನಾಯಕ್, ಹಿಂದೂ ಯುವಸೇನೆ ಹಿರಿಯಡ್ಕ ಘಟಕದ ಅಧ್ಯಕ್ಷರಾದ ಶೇಖರ ಶೆಟ್ಟಿ ಹಿರಿಯಡ್ಕ ಭಾಗವಹಿಸಲಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರು ಮುಂದೊಂದು ದಿನ ದೇಶದ ಪ್ರಧಾನಿ ಆಗಲಿದ್ದಾರೆ : ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ – Vishwanews24

Leave a Reply