ಮುಂದಿನ ವಿಧಾನಸಭಾ ಚುನವಣೆಗೆ ನಾನೇ ಗೋಲ್ ಕೀಪರ್ , ಬಿಜೆಪಿಗೆ ಒಂದೇ ಒಂದು ಗೋಲ್ ಸಂಪಾದಿಸಲು ಬಿಡುವುದಿಲ್ಲ.. : ಮಮತಾ ಬ್ಯಾನರ್ಜಿ – Vishwanews24
ಪ್ರಧಾನಿ ನರೇಂದ್ರ ಮೋದಿ ಒಬ್ಬ ದಂಗೆಕೋರ, ಟ್ರಂಪ್ಗೆ ಬಂದ ಅದೇ ದುರ್ಗತಿ ಮೋದಿಗೂ ಬರಲಿದೆ ..
ಮುಂದಿನ ವಿಧಾನಸಭಾ ಚುನವಣೆಗೆ ನಾನೇ ಗೋಲ್ ಕೀಪರ್ , ಬಿಜೆಪಿಗೆ ಒಂದೇ ಒಂದು ಗೋಲ್ ಸಂಪಾದಿಸಲು ಬಿಡುವುದಿಲ್ಲ.. ಮಮತಾ ಬ್ಯಾನರ್ಜಿ – Vishwanews24
ಹೂಗ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮತ್ತೆ ಗುಟುರು ಹಾಕಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿಯವರನ್ನು ದಂಗೆಕೋರ ಎಂದು ಕರೆದಿದ್ದಾರೆ.
ಗೂಗ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಒಬ್ಬ ದೇಶದ ದೊಡ್ಡ ದಂಗಾಬಾಝ್ (ದಂಗೆಕೋರ) ಎಂದು ಕಿಡಿ ಕಾರಿದ್ದಾರೆ.
ಮುಸ್ಲಿಮ್ ಒಕ್ಕೂಟದ 2021-22ನೇ ಸಾಲಿನ ಕಾಪು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶಭಿ ಅಹ್ಮದ್ ಕಾಝಿ -Vishwanews24
ಅಲ್ಲದೇ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಬಂದ ಅದೇ ದುರ್ಗತಿ ಪ್ರಧಾನಿ ನರೇಂದ್ರ ಮೋದಿಗೂ ಬರಲಿದೆ ಎಂದು ದೀದಿ ಭವಿಷ್ಯ ನುಡಿದಿದ್ದಾರೆ.ಕಲ್ಲಿದ್ದಲು ಕಳ್ಳ ಸಾಗಣಿಕೆ ಪ್ರಕರಣದಲ್ಲಿ ತಮ್ಮ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿಯಾ ಬ್ಯಾನರ್ಜಿ ಅವರನನ್ನು ಸಿಬಿಐ ವಿಚಾರಣೆ ನಡೆಸಿದ ಬೆನ್ನಲ್ಲೇ ಮಮತಾ ಅವರಿಂದ ಈ ಕಟು ಟೀಕೆಗಳು ಹೊರ ಬಿದ್ದಿವೆ.
ಜಯಲಲಿತಾ ಅವರ 73 ನೇ ಜನ್ಮದಿನ : ಪ್ರಧಾನಿ ಮೋದಿ ಸಹಿತ ಗೌರವ ಸಲ್ಲಿಸಿದ ಹಲವು ನಾಯಕರು -Vishwanews24
2019ರಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ಸರ್ಕಾರವನ್ನು ತೋಲಾಬಾಝ್ (ಗುಂಪಿನಲ್ಲಿ ಲೂಟಿ ಮಾಡುವವರು) ಎಂದು ಜರೆದಿದ್ದರು.ಇದಾದ ಬಳಿಕ ರಾಜ್ಯದ ಬಿಜೆಪಿ ನಾಯಕರೂ ಕೂಡ ಸರ್ಕಾರವನ್ನು ಇದೇ ಹೆಸರಿನಿಂದ ಟೀಕೆ ಮಾಡುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ದವೇ ದಂಗೆಕೋರ ಎಂದು ಸಿಡಿಗುಂಡು ಸಿಡಿಸಿದ್ದಾರೆ.
ಅಲ್ಲದೇ ಮುಂದಿನ ವಿಧಾನಸಭಾ ಚುನವಣೆಗೆ ನಾನೇ ಗೋಲ್ ಕೀಪರ್ ಎಂದಿರುವ ದೀದಿ, ಬಿಜೆಪಿಗೆ ಒಂದೇ ಒಂದು ಗೋಲ್ ಸಂಪಾದಿಸಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಮಾ.1ರಿಂದ ದೇಶಾದ್ಯಂತ 2ನೇ ಹಂತದ ಕೊರೋನಾ ಲಸಿಕೆ : 60 ವರ್ಷ ಮೇಲ್ಪಟ್ಟವರಿಗೆ ಉಚಿತ ಕರೋನ ಲಸಿಕೆ -Vishwanews24
ದೇಶವನ್ನು ದೈತ್ಯ ವ್ಯಕ್ತಿ ಆಳ್ವಿಕೆ ನಡೆಸುತ್ತಿದ್ದಾರೆ. ಅವರು ನಮ್ಮ ತಲೆ ಬುರುಡೆ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಬಂಗಾಳದ ಮೇಲೆ ದಾಳಿ ಮಾಡಿ ಕಬ್ಜಾ ಮಾಡಲು ಯತ್ನಿಸುತ್ತಿದ್ದಾರೆ. ನಿಮಗೆ ಬಂಗಾಳ ಬೇಕಾ? ಬಂಗಾಳವನ್ನು ಗುಜರಾತ್ ಆಳ್ವಿಕೆ ಮಡಲು ಅನುಮತಿಸುವುದಿಲ್ಲ ಎಂದು ಗುಡುಗಿದ್ದಾರೆ.

