ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು – vishwanews24

Featured, ದಕ್ಷಿಣ ಕನ್ನಡ

ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು

ಮುಲ್ಕಿ : ತಿಂಗಳ ಹಿಂದೆ ತನ್ನ ಕೆಲಸದ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಉತ್ತರ ಪ್ರದೇಶ ಮೂಲದ ಅಜಯ್ ಅವರದ್ದು ಕೊಲೆ ಮಾಡಲಾಗಿದೆ ಎಂದು ಶಂಕಿಸಿ ಆತನ ತಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಜಯ್ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬೇರುಗಳಿಂದ ತಯಾರಿಸಲಾಗುವ ಕುರ್ಚಿ, ಟೇಬಲ್ ಗಳನ್ನು ಮಾರಾಟ ಮಾಡುವ ಅಂಗಡಿ ಹೊಂದಿದ್ದರು. ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೀಡಾಗಿದ್ದ ಅಜಯ್ ನನ್ನು ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ನಗರದ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

2,186 ಕೋಟಿ ಅನುದಾನ ಬಾಕಿ: ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್​​ ಮೊರೆ  : ಈಶ್ವರ ಖಂಡ್ರೆ – vishwanews24

ಬಳಿಕ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಮುಲ್ಕಿ ಪೊಲೀಸರು UDR ದಾಖಲಿಸಿಕೊಂಡು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದರು.‌ ಬುಧವಾರ ಏಕಾಏಕಿ ಮೃತ ಅಜಯ್ ತಾಯಿ, ಪತ್ನಿ ಮತ್ತು ಮಗನೊಂದಿಗೆ ತಂದೆ ಮಾನ್‌ಸಿಂಗ್ ಎಂಬವರು ಮುಲ್ಕಿ ಪೊಲೀಸ್ ಠಾಣೆಗೆ ಬಂದು ಅಜಯ್ ನನ್ನು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದಾರೆ.

ಅದರಂತೆ, ಅಜಯ್ ಕುಟುಂಬವನ್ನು ಘಟನಾ ಸ್ಥಳಕ್ಕೆ ಕರೆತಂದ ಪೊಲೀಸರು, ಅವರ ಸಮ್ಮುಖದಲ್ಲಿ ಸ್ಥಳೀಯರನ್ನು ಕರೆಸಿ ವಿಚಾರಣೆ ನಡೆಸಿದರು. ಜೊತೆಗೆ ಕೊಲೆ ಪ್ರಕರಣ ದಾಖಲಾಗಿರುವ ಕಾರಣ ಸ್ಥಳವನ್ನು ಮಹಜರು ನಡೆಸಲಾಯಿತು. ಘಟನಾ ಸ್ಥಳಕ್ಕೆ ಮುಲ್ಕಿ ಪೊಲೀಸರು, ವಿಧಿವಿಜ್ಞಾನ ವಿಭಾಗದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಸತಿ ಬುಕಿಂಗ್ ಹೆಸರಲ್ಲಿ ನಕಲಿ ವೆಬ್‌ಸೈಟ್ ; ಪ್ರಕರಣ ದಾಖಲು – vishwanews24

Leave a Reply