ಮುಸ್ಲಿಂ ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಡೋದಕ್ಕೂ ಸಹ ಈ ಸರ್ಕಾರ ಬಿಡ್ತಾ ಇಲ್ಲ : ಪ್ರಮೋದ್ ಮುತಾಲಿಕ್ ಆಕ್ರೋಶ – Vishwanews24
ಮುಸ್ಲಿಂ ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಡೋದಕ್ಕೂ ಸಹ ಈ ಸರ್ಕಾರ ಬಿಡ್ತಾ ಇಲ್ಲ : ಪ್ರಮೋದ್ ಮುತಾಲಿಕ್ ಆಕ್ರೋಶ – Vishwanews24
ಕೋಲಾರ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.
ತಾನು ಬಂಧನಕ್ಕೊಳಗಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ನವೆಂಬರ್ 13 ರಂದು ನಡೆದ ದತ್ತ ಮಾಲಾಧಾರಿಗಳ ಬಸ್ ಮೇಲೆ ದಾಳಿ ಘಟನೆ ಅತ್ಯಂತ ಕ್ರೂರಿಯಾಗಿದೆ. ಐದು ನಿಮಿಷಯದಲ್ಲಿ ಪೊಲೀಸರು ಬರದೇ ಇದ್ದಿದ್ದರೆ ಬಸ್ ಅನ್ನು ಸುಟ್ಟು ಹಾಕುತ್ತಿದ್ದರು. 47 ಜನ ಹಿಂದೂ ಕಾರ್ಯಕರ್ತರು ಅಸು ನೀಗ್ತಾ ಇದ್ದರು. ಅದಕ್ಕಾಗಿ ಪೋಲೀಸ್ ಇಲಾಖೆ ಧನ್ಯವಾದ ಹೇಳುತ್ತೇನೆ. ಆದರೆ ಇವತ್ತು ತೆಗೆದುಕೊಂಡಿರುವ ಸರ್ಕಾರದ ಕ್ರಮ ಸರಿಯಲ್ಲ. ಹಿಂದೂ ಸಮಾಜದ ಮೇಲೆ ದೌರ್ಜನ್ಯ ನಡೆದಿದೆ. ಈ ಕುರಿತು ಪ್ರತಿಭಟನೆ ಸಹ ಮಾಡಬಾರದಾ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
47 ಜನ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯಿಂದ ನನಗೆ ತೀವ್ರ ನೋವು ಉಂಟಾಗಿದೆ ಎಂದ ಪ್ರಮೋದ್ ಮುತಾಲಿಕ್, ಮುಸ್ಲಿಂ ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಡೋದಕ್ಕೂ ಸಹ ಈ ಸರ್ಕಾರ ಬಿಡ್ತಾ ಇಲ್ಲ. ಸರ್ಕಾರ ನಮ್ಮನ್ನ ತಡೆಯುತ್ತ ಇರೋದು ಸರಿಯಲ್ಲ ಎಂದು ರಾಜ್ಯ ತನ್ನ ಬಂಧನಕ್ಕೂ ಮುನ್ನ ಕೋಲಾರದ ರಾಮಸಂದ್ರ ಗಡಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.
ದತ್ತ ಮಾಲಾಧಾರಿಗಳ ಬಸ್ ಮೇಲೆ ನಡೆದ ದಾಳಿ ಖಂಡಿಸಿ ಕೋಲಾರದಲ್ಲಿ ಹಿಂದೂಪರ ಸಂಘಟನೆಗಳಿಂದ ಬಂದ್ಗೆ ಕರೆನೀಡಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ಗೆ ಕೋಲಾರ ಪ್ರವೇಶವನ್ನು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ನಿನ್ನೆಯೇ ನಿಷೇಧ ಮಾಡಿದ್ದರು. ಆದರೂ ಪ್ರಮೋದ್ ಮುತಾಲಿಕ್ ಕೋಲಾರ ಕಡೆಗೆ ಆಗಮಿಸುತ್ತಿದ್ದ ಸುದ್ದಿ ಪೊಲೀಸರಿಗೆ ಇಂದು ತಿಳಿದಿತ್ತು. ಈ ಹಿನ್ನೆಲೆ ಕೋಲಾರ ಬಾರ್ಡರ್ ಬಳಿ ಪೊಲೀಸರ ನಿಯೋಜನೆ ಮಾಡಿ ತಿಳುವಳಿಕೆ ನೋಟಿಸ್ ನೀಡಿ ವಾಪಸು ಕಳುಹಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿತ್ತು. ಆದರೆ ಪ್ರಮೋದ್ ಮುತಾಲಿಕ್ ಗಡಿ ಪ್ರವೇಶಿಸಿ ಮುಂದೆ ಬರುತ್ತಿದ್ದಂತೆ ನಂದಗುಡಿ ಪೊಲೀಸರು ಮುತಾಲಿಕ್ರನ್ನು ಬಂಧಿಸಿದ್ದಾರೆ.
