ಮೂಡುಬಿದಿರೆ : ಜಿ.ಕೆ. ಎಂಟರ್ಪ್ರೈಸಸ್ ಮಾಲಕ ಗಣೇಶ್ ಕಾಮತ್ ಹೃದಯಾಘಾತದಿಂದ ನಿಧನ – Vishwanews24
ಮೂಡುಬಿದಿರೆ : ಜಿ.ಕೆ. ಎಂಟರ್ಪ್ರೈಸಸ್ ಮಾಲಕ ಗಣೇಶ್ ಕಾಮತ್ ಹೃದಯಾಘಾತದಿಂದ ನಿಧನ
ಮೂಡುಬಿದಿರೆ : ಜಿ.ಕೆ. ಎಂಟರ್ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ ಅವರು ಇಂದು ಹೃದಯಾಘಾತದಿಂದ ನಿಧನ ಹೊಂದಿದರು.
ವಿದ್ಯುತ್ ಅವಘಡದಿಂದ ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದರೂ ಛಲಬಿಡದೆ ಜಿ. ಕೆ ಉದ್ಯಮವನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿ ಎನಿಸಿಕೊಂಡು ಹಲವಾರು ಜನರಿಗೆ ಉದ್ಯೋಗದಾತರಾಗಿದ್ದರು.
ಇಂದು ಬೆಳಗಿನ ವೇಳೆ ತನ್ನ ಉದ್ಯಮ ಮಳಿಗೆಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಗೊಂಡಿದ್ದು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದರು.
ಅವರು ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಗೌರವಾಧ್ಯಕ್ಷರಾಗಿದ್ದರು.
