ಮೂಲ್ಕಿ: ಸಂಬಂಧಿಕರಿಗೆ ವಾಟ್ಸಾಪ್ ಲೊಕೇಶನ್ ಕಳುಹಿಸಿ ಪಾವಂಜೆ ಸೇತುವೆಯಿಂದ ಹಾರಿದ ಪೋಸ್ಟ್ ಆಫೀಸ್ ಉದ್ಯೋಗಿ – Vishwanews24
ಮೂಲ್ಕಿ: ಸಂಬಂಧಿಕರಿಗೆ ವಾಟ್ಸಾಪ್ ಲೊಕೇಶನ್ ಕಳುಹಿಸಿ ಪಾವಂಜೆ ನಂದಿನಿ ನದಿಗೆ ಹಾರಿದ ಪೋಸ್ಟ್ ಆಫೀಸ್ ಉದ್ಯೋಗಿ
ಮಂಗಳೂರು : ಮಂಡ್ಯ ಮೂಲದ ಯುವಕ ಪ್ರಸ್ತುತ ಮಂಗಳೂರು ಪೋಸ್ಟ್ ಆಫೀಸ್ ಉದ್ಯೋಗಿ ರಾಕೇಶ್ ಗೌಡ (26) ಪಾವಂಜೆ ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾದ ಘಟನೆ ಜು.೧೨ ರ ತಡರಾತ್ರಿ ಬೆಳಕಿಗೆ ಬಂದಿದೆ.
ನದಿಗೆ ಹಾರುವ ಮುನ್ನ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್ ನಲ್ಲಿ ಬಿಟ್ಟಿದ್ದರು ಎನ್ನಲಾಗಿದೆ. ಅಲ್ಲದೆ ತಾನು ನದಿಗೆ ಹಾರುತ್ತಿರುವ ಕುರಿತು ಸಂಬಂಧಿಕರಿಗೆ ವಾಟ್ಸಾಪ್ನಲ್ಲಿ ಲೊಕೇಶನ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಕೇಶ್ ಗೌಡ ಅವರ ಮಾವ ಅಬಕಾರಿ ಇಲಾಖೆಯ ಡಿವೈಎಸ್ಪಿ ಆಗಿದ್ದು ಇಲಾಖೆಯ ಸಿಬ್ಬಂದಿಗಳು ಮತ್ತು, ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಚಿತ್ರನಟ ಶಿವರಂಜನ್ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ : ಅಪಾಯದಿಂದ ಪಾರು – Vishwanews24
