ಮೈಸೂರು ದಸರಾ: ಈ ಬಾರಿಯ ಜಂಬೂ ಸವಾರಿಯಲ್ಲಿ 53 ಆಕರ್ಷಕ ಸ್ತಬ್ಧಚಿತ್ರಗಳ ಮೆರುಗು – vishwanews24

Featured, ರಾಜ್ಯ ನ್ಯೂಸ್

ಮೈಸೂರು ದಸರಾ: ಈ ಬಾರಿಯ ಜಂಬೂ ಸವಾರಿಯಲ್ಲಿ 53 ಆಕರ್ಷಕ ಸ್ತಬ್ಧಚಿತ್ರಗಳ ಮೆರುಗು

ಮೊದಲ ಬಾರಿಗೆ ಹೊರರಾಜ್ಯಗಳ ಸ್ತಬ್ಧಚಿತ್ರಗಳು ಭಾಗಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯ ಮೆರವಣಿಗೆಯಲ್ಲಿ ಬರೋಬ್ಬರಿ 53 ಸ್ತಬ್ಧಚಿತ್ರಗಳು ನಾಡಿನ ವೈಭವವನ್ನು ಸಾರಲು ಸಜ್ಜಾಗುತ್ತಿವೆ.

ಮೈಸೂರಿನ ಎಪಿಎಂಸಿ ಯಾರ್ಡ್‌ನಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ಅಂತಿಮ ಘಟಕ್ಕೆ ತಲುಪಿದ್ದು, ಕಲಾವಿದರು ಹಾಗೂ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ: 

ಉಡುಪಿ: ಅ. 26ರೊಳಗೆ ರಾಜಣ್ಣಗೆ ಸಚಿವ ಸ್ಥಾನ ನೀಡಿ: ಅನುಪಮಾ ಶೆಣೈ – vishwanews24

ಈ ಬಾರಿಯ ವಿಶೇಷತೆಗಳೇನು?
ಮೈಸೂರು ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೊರರಾಜ್ಯಗಳ ಸ್ತಬ್ಧಚಿತ್ರಗಳು ಜಂಬೂ ಸವಾರಿಯ ಮೆರಗು ಹೆಚ್ಚಿಸಲಿವೆ. ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಭಾಗಿಯಾಗಲಿವೆ.

ರಾಜ್ಯದ 15 ಜಿಲ್ಲೆಗಳ ಪ್ರತಿನಿಧಿತ್ವ:
ಕರ್ನಾಟಕದ ವಿವಿಧ ಭಾಗಗಳ ಐತಿಹಾಸಿಕ ಸ್ಮಾರಕಗಳು, ಶ್ರೀಮಂತ ಸಂಸ್ಕೃತಿ, ಜನಜೀವನ ಶೈಲಿ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ.

ಇದನ್ನೂ ಓದಿ: 

ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ; ಪ್ರಯಾಣಿಕರು ಸುರಕ್ಷಿತ – vishwanews24

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು:
ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಸಂದೇಶ ಸಾರುವ ಟ್ಯಾಬ್ಲೊಗಳೂ ಸಹ ಸಿದ್ಧಗೊಳ್ಳುತ್ತಿವೆ. ಕಳೆದ 10 ದಿನಗಳಿಂದ ಒಂದೂವರೆ ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಕಾರ್ಮಿಕರು ಹಗಲು-ರಾತ್ರಿ ಎನ್ನದೆ ಅತ್ಯಂತ ಆಕರ್ಷಕವಾಗಿ ಸ್ತಬ್ಧಚಿತ್ರಗಳಿಗೆ ರೂಪ ನೀಡುತ್ತಿದ್ದಾರೆ.

ಅಂತಿಮ ಹಂತದ ಕೆಲಸಗಳು ಭರದಿಂದ ಸಾಗಿದ್ದು, ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿ ಕಲಾಪ್ರಿಯರಿಗೆ ಕಣ್ಣಿಗೆ ಹಬ್ಬವನ್ನು ಉಣಬಡಿಸಲು ಸಿದ್ಧವಾಗಿದೆ.

Leave a Reply