ಮೊಟ್ಟೆ ಬೆಲೆ ಏರಿಕೆಯಾದ್ರೂ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬೇಕು : ಶಿಕ್ಷಣ ಇಲಾಖೆ ಸೂಚನೆ – Vishwanews24

Featured, ರಾಜ್ಯ ನ್ಯೂಸ್

ಮೊಟ್ಟೆ ಬೆಲೆ ಏರಿಕೆಯಾದ್ರೂ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬೇಕು : ಶಿಕ್ಷಣ ಇಲಾಖೆ ಸೂಚನೆ

ಬೆಂಗಳೂರು : ರಾಜ್ಯದ 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡಲಾಗುತ್ತಿದ್ದು, ಹೆಚ್ಚಿನ ಮಕ್ಕಳು ಮೊಟ್ಟನೇ ಬೇಕು ಎಂದು ಹೇಳುತ್ತಿದ್ದಾರೆ.

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರವಾಗಿ ಶಿಕ್ಷಣ ಇಲಾಖೆ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದ್ದು, ಹೆಚ್ಚಿನ ಮಕ್ಕಳು ತಮಗೆ ಮೊಟ್ಟೆಯೇ ಬೇಕು ಎಂದು ಹೇಳಿದ್ದಾರೆ.

ಹೀಗಾಗಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಟ್ಟೆ ಕೊಡುವುದನ್ನು ನಿಲ್ಲಿಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಜ.27 ರಿಂದ ಮೂರು ದಿನ `ಹಂಪಿ ಉತ್ಸವ’  – Vishwanews24

ಶಿಕ್ಷಣ ಇಲಾಖೆಯು ರಾಜ್ಯದ ಒಟ್ಟು 47.97 ಲಕ್ಷ ಸರ್ಕಾರಿ ಶಾಲಾ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದ್ದು, ಈ ಪೈಕಿ 28.97 ಲಕ್ಷ ಮಕ್ಕಳು ಮೊಟ್ಟೆ ಬೇಕು ಎಂದಿದ್ದಾರೆ. 3.37 ಲಕ್ಷ ಮಕ್ಕಳು ಬಾಳೆಹಣ್ಣು ಕೇಳಿದ್ರೆ, 2.27 ಲಕ್ಷ ವಿದ್ಯಾರ್ಥಿಗಳು ಚಿಕ್ಕಿಬೇಕು ಎಂದು ಹೇಳಿದ್ದಾರೆ. ಹೀಗಾಗಿ ಮೊಟ್ಟೆ ಬೆಲೆ ಏರಿಕೆಯಾದ್ರೂ ಮಕ್ಕಳಿಗೆ ಮೊಟ್ಟೆ ನೀಡಬೇಕು ಎಂದು ಹೇಳಿದೆ.

ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಮಾತ್ರ ಬಾಳೆಹಣ್ಣು, ಮಾತ್ರ ಚಿಕ್ಕಿ ನೀಡಬಹುದು. ಆದರೆ ಕೆಲವು ಕಡೆ ಮಕ್ಕಳು ಮೊಟ್ಟೆ ಕೇಳಿದರೂ ಬಲವಂತವಾಗಿ ಬಾಳೆಹಣ್ಣು, ಚಿಕ್ಕಿ ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆದ್ದರಿಂದ ಮೊಟ್ಟೆ ಕೇಳಿದವರಿಗೆ ಮೊಟ್ಟೆಯನ್ನೇ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಸೇನೆಯಲ್ಲಿ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ  – Vishwanews24

Leave a Reply