ಮೋದಿ ಭ್ರಮೆ ಬೇಡ, ಮೋದಿ ಹೆಸರೇಳಿಕೊಂಡು ಕೂರಬೇಡಿ : ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಎಚ್ಚರಿಕೆಯ ಸಂದೇಶ – Vishwanews24

Featured, ರಾಜ್ಯ ನ್ಯೂಸ್

ಮೋದಿ ಭ್ರಮೆ ಬೇಡ, ಮೋದಿ ಹೆಸರೇಳಿಕೊಂಡು ಕೂರಬೇಡಿ : ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಎಚ್ಚರಿಕೆಯ ಸಂದೇಶ

ಬೆಂಗಳೂರು: ನರೇಂದ್ರ ಮೋದಿ ಬರ್ತಾರೆ, ಗೆಲ್ಲಿಸ್ತಾರೆ ಎಂದು ನಂಬಿ ಕೂತಿರುವ ರಾಜ್ಯ ನಾಯಕರಿಗೆ ಬಿಗ್ ಶಾಕ್ ಸಿಕ್ಕಿದೆ. ಬಿಜೆಪಿ ನಾಯಕರ ವರ್ತನೆಯಿಂದ ಪ್ರಧಾನಿ ನರೇಂದ್ರ ಮೋದಿ ಎಂಬ ಚರ್ಚೆಗಳು ಶುರವಾಗಿವೆ.

ಮೋದಿಯ ಮೇಲೆ ಅತಿಯಾದ ಅವಲಂಬನೆ ಆಗಿ ರಾಜ್ಯದ ನಾಯಕರ ಶ್ರಮ ಕಡಿಮೆ ಆಗಿದೆಯಾ? ಎಂಬ ಪ್ರಶ್ನೆಗಳೆದ್ದಿವೆ. ಹಾಗಾದ್ರೆ ಬಿಜೆಪಿ ಹೈಕಮಾಂಡ್‌ಗೆ ತಲುಪಿದ ಆ ವರದಿಯಿಂದಲೇ ಮೋದಿ ಮಹಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಅಂದಹಾಗೆ 2024ರ ಚುನಾವಣೆಗೆ ಇನ್ನೂ 400 ದಿನ ಬಾಕಿ ಇದೆ. ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲೇ ಪ್ರಧಾನಿ ನರೇಂದ್ರ ಮೋದಿ ಕಹಳೆ ಊದಿದ್ದಾರೆ. ಮೋದಿಯಿಂದ ಎಚ್ಚರಿಕೆಯ ಖಡಕ್ ಸಂದೇಶ ರವಾನೆಯಾಗಿದೆ ಎನ್ನಲಾಗಿದ್ದು, ಮೋದಿ ಭ್ರಮೆ ಬೇಡ, ಮೋದಿ ಹೆಸರೇಳಿಕೊಂಡು ಕೂರಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅತಿಯಾದ ಆತ್ಮವಿಶ್ವಾಸ ಬೇಡ, ಮೊದಲು ಮತದಾರರ ಮನ ಗೆಲ್ಲಿ ಎಂದು ಮೋದಿಯಿಂದ ಸಲಹೆ ಕೊಟ್ಟಿದ್ದು ಕರ್ನಾಟಕವೇ ಮೊದಲ ಟಾರ್ಗೆಟ್ ಎಂಬ ಚರ್ಚೆ ಆಗುತ್ತಿದೆ.

ಸೈಂಟ್‌ ಮೇರಿಸ್‌ ದ್ವೀಪ: ಪ್ರವಾಸಿಗರ‌ ಮೇಲೆ ನಿರ್ವಹಣಾ ಸಿಬ್ಬಂದಿ ದರ್ಪ – ವರದಿಗೆ ಜಿಲ್ಲಾಧಿಕಾರಿ ಸೂಚನೆ – Vishwanews24

ಅಂದಹಾಗೆ ಕರ್ನಾಟಕ ಸೇರಿದಂತೆ ಮುಂಬರುವ ಚುನಾವಣೆಗಳ ತಂತ್ರಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸುವ ಸುಳಿವು ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಒಟ್ಟು 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇಘಾಲಯ, ನಾಗಲ್ಯಾಂಡ್, ತ್ರಿಪುರ ಬಳಿಕ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದ ಬಳಿಕ ಮಿಝೋರಾಂ, ಛತ್ತೀಸ್‌ಗಢ್, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಆದ್ರೆ 25 ಸಂಸದರನ್ನು ಕೊಟ್ಟಿರುವ ಕರ್ನಾಟಕದ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮೊದಲ ಸವಾಲಾಗಿದೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

 

Leave a Reply