ಮೋದಿ ಮತ್ತು ಅಮಿತ್ ಶಾ ಅವರನ್ನು ಕಿತ್ತೊಗೆಯಬೇಕು, ಕೇಸರಿ ಬಟ್ಟೆ ಧ್ವಜ ನೋಡಿ ಸಾಕಾಗಿತ್ತು,ಮುಸಲ್ಮಾನರು ಭಾರತ ಮಾತೆಯ ಮಕ್ಕಳು : ರಮೇಶ್ ಕುಮಾರ್ -Vishwanews24
ಉಡುಪಿ: ಎಲ್ಲಿ ನೋಡಿದ್ರೂ ರಾಷ್ಟ್ರಧ್ವಜ ಕಾಣಿಸ್ತಿದೆ ಸ್ವಾತಂತ್ರ್ಯ ಕಾಲದಲ್ಲಿ ನಾವು ಇರಲಿಲ್ಲ ಸಾಯೋ ಕಾಲಕ್ಕೆ ಇಷ್ಟು ಧ್ವಜಗಳನ್ನು ನೋಡುವ ಅವಕಾಶವಾಗಿದೆ. ಕೇಸರಿ ಬಟ್ಟೆ ಧ್ವಜ ನೋಡಿ ಸಾಕಾಗಿತ್ತು. ಮುಸಲ್ಮಾನರನ್ನು ಅನುಮಾನದಿಂದ ನೋಡಬೇಡಿ. ಭಾರತ ಮಾತೆ ಕಣ್ಣೀರು ಹಾಕುತ್ತಾಳೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಅವರು ಗುರುವಾರ ಸಹಬಾಳ್ವೆ ಉಡುಪಿ ಹಾಗೂ ಇತರ ಎಡಪಂಥೀಯ ಮತ್ತು ಮುಸ್ಲಿಂ ಸಂಘಟನೆಗಳು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನ ಆಯೋಜಿಸಿದ್ದ ಸಿಎಎ, ಎನ್ ಆರ್ ಸಿ ಮತ್ತು ಎನ್ ಆರ್ ಪಿ ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಸಲ್ಮಾನರು ಭಾರತ ಮಾತೆಯ ಮಕ್ಕಳು, ಬಿಜೆಪಿಯವರಿಗೆ ಭಾರತದ ಇತಿಹಾಸದ ಪರಿಚಯ ಇಲ್ಲ. ಭಾರತದ ಇತಿಹಾಸ ಬಿಜೆಪಿಗರಿಗೆ ಬೇಕಾಗಿಲ್ಲ ಗೋಡ್ಸೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವು ಬಿಡಲ್ಲ. ಅಮೇರಿಕಾದಲ್ಲಿ ಜನಿಸಿದ್ರೆ ಪೌರತ್ವ ಸಿಗುತ್ತದೆ. 1955 ರಲ್ಲಿ ಜಾತಿ ಧರ್ಮದ ವಿಚಾರದಲ್ಲಿ ಪೌರತ್ವ ಕಾಯ್ದೆ ಮಾಡಿಲ್ಲ ,ನಿರಾಶ್ರಿತರು ನುಸುಳುಕೋರರು ಎಂಬ ಎರಡು ವಿಧ ಇದೆ. ಪೌರತ್ವ ಕಾಯ್ದೆ ಯನ್ನು ಧರ್ಮಾಧಾರಿತ ಮಾಡಿದ್ದಾರೆ. ಮೋದಿ ಸರಕಾರ ಸಂವಿಧಾನ ವಿರೋಧಿ ಸ್ವಾತಂತ್ರ್ಯ ನಂತರ ಸಂವಿಧಾನ ಮತ್ತು ಜನರ ನಡುವೆ ತಿಕ್ಕಾಟ ಶುರುವಾಗಿದೆ . ಸ್ವಲ್ಪ ದಿನದಲ್ಲೇ ದೇಶದ ಜಾತಕವನ್ನು ಜನ ಬದಲು ಮಾಡುತ್ತಾರೆ ಎಂದು ಹೇಳಿದರು.
ಮೋದಿ ಮತ್ತು ಅಮಿತ್ ಶಾ ಅವರನ್ನು ಕಿತ್ತೊಗೆಯಬೇಕು. ಬಿಜೆಪಿಗರು ಮೊದಲು ದಲಿತರನ್ನು ಸರಿಯಾಗಿ ನಡೆಸಿಕೊಳ್ಳಲಿ. ಬಿಜೆಪಿಗರು ವರ್ಣಾಶ್ರಮ ಪದ್ದತಿಯನ್ನು ಮತ್ತೆ ತರಲು ಹೊರಟಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಡುಪಿಯಲ್ಲಿ ಹೇಳಿಕೆ ನೀಡಿದರು.
ಕವಿತಾ ರೆಡ್ಡಿ, ಮೆಹರೋಝ್ ಖಾನ್, ಭವ್ಯ ನರಸಿಂಹಮೂರ್ತಿ ಮುಂತಾದವರು ಸಭೆಯನ್ನು ಉದ್ದೇಶಿಸಿ ಮತನಾಡಿದರು. ಎಡಪಂಕ್ತೀಯ ಸಂಘಟನೆಗಳ ನಾಯಕರಾದ ಜಿ ರಾಜಶೇಖರ್, ಫ್ರಶಾಂತ್ ಜತ್ತನ್ನ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಐವಾನ್, ಅಸಾದ್ ಜಪರ್, ಹಾಜಿ ಅಭ್ದುಲ್ಲಾ ಜಫರ್, ರಮೇಶ್ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.
ವಿಲಿಯಮ್ ಮಾರ್ಟಿಸ್, ಸಮಿತಿ ಗೌರವಾಧ್ಯಕ್ಷರು, ಸಂವಿಧಾನ ಪೀಠಿಕೆಯನ್ನುಚ್ಚರಿಸಿದರು. ಸಹಬಾಳ್ವೆ ಉಡುಪಿಯ ಅಧ್ಯಕ್ಷ ಅಮೃತ್ ಶೆಣೈ ಪ್ರಸ್ತಾವನೆಗೈದರು. ದಲಿತ ಸಂಘಟನೆಯ ಸುಂದರ್ ಮಾಸ್ತರ್ ಧನ್ಯವಾದ ಮಾಡಿದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
