ಯಾವುದೇ ಅಡ್ಡಿ ಆತಂಕಗಳು ಎದುರಾಗದೆ ಮೀನುಗಾರಿಕೆ ಸುಗಮವಾಗಲಿ : ಗಂಗೊಳ್ಳಿಯಲ್ಲಿ ಸಮುದ್ರ ಪೂಜೆ – vishwanews24

Featured, ಉಡುಪಿ

ಗಂಗೊಳ್ಳಿ: ಮತ್ಸ್ಯಕ್ಷಾಮ ಬಾರದೆ, ಯಾವುದೇ ಅಡ್ಡಿ ಆತಂಕಗಳು ಎದುರಾಗದೆ ಮೀನುಗಾರಿಕೆ ಸುಗಮವಾಗಲಿ : ಮೀನುಗಾರರಿಂದ ಸಮುದ್ರರಾಜನಿಗೆ ವಿಶೇಷ ಪೂಜೆ

ಉಡುಪಿ: ಈ ಸಾಲಿನಲ್ಲಿ ಮತ್ಸ್ಯಕ್ಷಾಮ ಬಾರದೆ, ಮೀನುಗಳ ಸಮೃದ್ಧಿ ನೆಲೆಸಿ ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಮೀನುಗಾರರಿಗೆ ಎದುರಾಗದಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಸಮುದ್ರಪೂಜೆ ನೆರವೇರಿಸಿದರು.

ಗಂಗೊಳ್ಳಿಯ ಅರ್ಚಕ ವೇದಮೂರ್ತಿ ವಿಠಲ್‌ದಾಸ್‌ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿಗಳು ನೆರವೇರಿದವು. ಪರ್ಸಿನ್ ಬೋಟ್, ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲ‌ರ್ ಬೋಟ್‌ಗಳ ಸಂಘದ ಸದಸ್ಯರು ಸಮುದ್ರ ರಾಜನಿಗೆ ಹಾಲು, ಸೀಯಾಳ, ಫಲಪುಷ್ಪವನ್ನು ಅರ್ಪಿಸಿದರು.

ಮಂಗಳೂರು: ಕಾಲೇಜು ಹಾಸ್ಟೆಲ್ ಗೆ ಗಾಂಜಾ ತಂದಿದ್ದ ಮೂವರು ವಿದ್ಯಾರ್ಥಿಗಳ ಬಂಧನ – vishwanews24

ಕಡಲಿನಲ್ಲಿ ತುಪಾನ್‌(ಗಾಳಿಯೊತ್ತಡ) ಹೆಚ್ಚಿದೆ. ಹೀಗಾಗಿ ಎರಡು ತಿಂಗಳ ಮೀನುಗಾರಿಕಾ ನಿರ್ಬಂಧ ಜು.31ಕ್ಕೆ ಮುಗಿದಿದ್ದರೂ ಕೂಡ ಕಡಲಿಗಿಳಿಯಲು ಅಸಾಧ್ಯವಾಗಿದೆ. ಗಂಗೊಳ್ಳಿಯಲ್ಲಿ ದಡದಲ್ಲಿದ್ದ ಬೋಟ್‌ಗಳನ್ನು ನೀರಿಗೆ ಇಳಿಸುವ ಕಾರ್ಯ, ಬಲೆ ಹೆಣೆಯುವ, ಇನ್ನಿತರ ಪರಿಕರಗಳನ್ನು ಒಟ್ಟುಗೂಡಿಸುವ, ಬೋಟ್‌ಗಳಿಗೆ ಬಣ್ಣ ಬಳಿಯುವ ಕಾರ್ಯ ಭರದಿಂದ ನಡೆಯುತ್ತಿದೆ.

ಗಂಗೊಳ್ಳಿಯಲ್ಲಿ ಆ.16ರ ನಂತರ ಕಡಲಿಗೆ ಇಳಿಯಲು ಸಿದ್ಧತೆ ಮಾಡಿಕೊಂಡಿದೆ ಎಂದು ಪರ್ಸಿನ್ ಬೋಟ್‌ಗಳ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ತಿಳಿಸಿದ್ದಾರೆ.

ಉಡುಪಿ: ಸುರಕ್ಷತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ 23 ಬಸ್‌ಗಳ ವಿರುದ್ಧ ಪ್ರಕರಣ ದಾಖಲು – vishwanews24

Leave a Reply