Featured

ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ, ಇದೊಂದು ಸಾಮಾನ್ಯವಾದ ಪ್ರಕ್ರಿಯೆ ಭಯಪಡುವ ಅಗತ್ಯವಿಲ್ಲ : ಸುಧಾಕರ್  – VIshwanews24

ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ, ಇದೊಂದು ಸಾಮಾನ್ಯವಾದ ಪ್ರಕ್ರಿಯೆ ಭಯಪಡುವ ಅಗತ್ಯವಿಲ್ಲ : ಸುಧಾಕರ್  – VIshwanews24

ಬೆಂಗಳೂರು: ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ. ಇದೊಂದು ಸಾಮಾನ್ಯವಾದ ಪ್ರಕ್ರಿಯೆ ಆಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ನೆಗಡಿ, ಶೀತ ಹೆಚ್ಚಳ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಸೀಸನಲ್ ಫ್ಲೋ. ಡಿಸೆಂಬರ್ ನಿಂದ ಫೆಬ್ರವರಿವರೆಗೂ ಪ್ರತಿ ವರ್ಷ ಅದು ಇರುತ್ತೆ. ಸಾರಿ ಮತ್ತು ILI ಕೇಸ್ ಅವು. ಈ ಲಕ್ಷಣ ಇರೋರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡ್ತಿದ್ದೇವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಾವು ಹೆಚ್ಚು ಟೆಸ್ಟ್ ಮಾಡುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ಒಂದು ರಾಜ್ಯ ಕಡಿಮೆ 35 ಸಾವು ತೋರಿಸಿದ್ದಾರೆ. ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆಸ್ಪತ್ರೆಗೆ ಸೆರೋರ ಪ್ರಮಾಣವೂ ಕಡಿಮೆ ಇದೆ. ನಾವು ಮುಂಚಿತವಾಗಿ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ತಿರೋದ್ರಿಂದ ನಮ್ಮಲ್ಲಿ ನಿಯಂತ್ರಣದಲ್ಲಿ ಇದೆ ಎಂದರು.

ಸಿಎಂ ಸಭೆ ಕರೆದಿದ್ದಾರೆ. ಪಾಸಿಟಿವ್ ಕೇಸ್, ಆಸ್ಪತ್ರೆಗೆ ಸೇರೋರು, ಮಕ್ಕಳ ಬಗ್ಗೆ ಸಭೆ ಆಗುತ್ತೆ. ತಜ್ಞರು, ಸಚಿವರು ಸಭೆಯಲ್ಲಿ ಇರುತ್ತಾರೆ. ತಜ್ಞರ ಸಭೆ ಬಳಿಕ ನಿರ್ಧಾರ ಘೋಷಣೆ ಮಾಡ್ತೀವಿ. ವೀಕೆಂಡ್ ಕಫ್ರ್ಯೂ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ. ನಾವು ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ನಮ್ಮ ಕೆಲಸ. ಹೆಚ್ಚು ಸಾವು-ನೋವು ಆಗಬಾರದು ಅನ್ನೋದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

ಬೆಳಗಾವಿಯಲ್ಲಿ ಇಬ್ಬರು ಮಕ್ಕಳು ಚುಚ್ಚು ಮದ್ದಿನಿಂದ ಸಾವನ್ನಪ್ಪಿರುವ ಪ್ರಕರಣ ಸಂಬಂಧ ಮಾತನಾಡಿ, ಸೆಪ್ಟಿಕ್ ಶಾಕ್ ಸಿಂಡ್ರೋಮ್ ನಿಂದ ಸತ್ತಿರೋ ಬಗ್ಗೆ ವರದಿ ಆಗಿದೆ. ಆದರೂ ಮತ್ತೊಂದು ಸುತ್ತಿನ ತನಿಖೆಗೆ ಸೂಚನೆ ನೀಡಿದ್ದೇನೆ. ಎರಡು ದಿನಗಳಲ್ಲಿ ವರದಿ ಕೊಡಲು ಸೂಚನೆ ನೀಡಲಾಗಿದೆ. ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಮಾಡಲು ಸೂಚನೆ ನೀಡಲಾಗಿದೆ. ಅಲ್ಲಿನ ANM ಮತ್ತು ಫಾರ್ಮಸಿಸ್ಟ್ ರನ್ನ ತಕ್ಷಣ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಈಗ ಅಮಾನತು ಆಗುತ್ತಾರೆ. ನೋಡಲ್ ಆಫೀಸ್ ರನ್ನ ತನಿಖೆಗೆ ಕಳುಹಿಸುತ್ತಿದ್ದೇನೆ. ಪ್ರೊಟೋಕಾಲ್ ಪ್ರಕಾರ ಚಿಕಿತ್ಸೆ ನೀಡಿದ್ದಾರಾ ಅಂತ ತನಿಖೆ ಮಾಡಲಾಗುತ್ತೆ. ಎರಡು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

Vishwa News 24

Recent Posts

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…

4 hours ago

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

6 hours ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

6 hours ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

7 hours ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

7 hours ago

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ – ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ- vishwanews24

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ - ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ…

7 hours ago