ರಾಜ್ಯದಲ್ಲೂ `ಜನಸಂಖ್ಯೆ ನಿಯಂತ್ರಣ ನೀತಿ’ ಜಾರಿಗೆ ತರುವುದು ಒಳ್ಳೆಯದು : ಸಚಿವ ಭೈರತಿ ಬಸವರಾಜ್ -Vishwanews24

Featured, ರಾಜ್ಯ ನ್ಯೂಸ್

ರಾಜ್ಯದಲ್ಲೂ `ಜನಸಂಖ್ಯೆ ನಿಯಂತ್ರಣ ನೀತಿ’ ಜಾರಿಗೆ ತರುವುದು ಒಳ್ಳೆಯದು : ಸಚಿವ ಭೈರತಿ ಬಸವರಾಜ್ -Vishwanews24

ದಾವಣಗೆಗೆರೆ : ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿದ್ರೆ ಅನುಕೂಲವಾಗಲಿದ್ದು, ಎಲ್ಲ ಮಕ್ಕಳಿಗೆ, ಜನರಿಗೆ ಮೂಲ ಸೌಕರ್ಯ ಸಿಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮ ರೂಪಿಸಿಕೊಂಡಿದ್ದು, ಕರ್ನಾಟಕದಲ್ಲಿ ಕೂಡ ಜನಸಂಖ್ಯೆ ನಿಯಂತ್ರಣ ಸಂಬಂಧ ಸಾಧಕ-ಬಾಧಕಗಳನ್ನು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದ್ದು, ಜನಸಂಖ್ಯೆ ನಿಯಂತ್ರಣ ಮಾಡಿದ್ರೆ ಅನುಕೂಲವಾಗಲಿದೆ. ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಸೌಲಭ್ಯಗಳ ಕೊರತೆ ಉಂಟಾಗುತ್ತಿದೆ. ಹಾಗಾಗಿ ಜನಸಂಖ್ಯೆ ನೀತಿ ಜಾರಿಗೆ ತರುವುದು ಒಳ್ಳೆಯದು ಎಂದರು.