ರಾಜ್ಯದ ಮೈತ್ರಿ ಸರ್ಕಾರಕ್ಕೆ ಬಹುಮತವಿದೆ. ಸಮಯ ಬಂದಾಗ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತು ಮಾಡುತ್ತಾರೆ : ಶ್ರೀಕಂಠೇಗೌಡ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ರಾಜ್ಯದ ಮೈತ್ರಿ ಸರ್ಕಾರಕ್ಕೆ ಬಹುಮತವಿದೆ. ಸಮಯ ಬಂದಾಗ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತು ಮಾಡುತ್ತಾರೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಬಹುಮತ ಇದೆ. ಅಗತ್ಯ ಬಿದ್ದಾಗ ಸಿಎಂ ಬಹುಮತ ಸಾಬೀತು ಮಾಡುತ್ತಾರೆ. ಅಧಿವೇಶನದಲ್ಲಿ ರಾಜ್ಯಪಾಲರು ಸುಮ್ಮನೆ ಹಸ್ತಕ್ಷೇಪ ಮಾಡಬಾರದು. ಬಹುಮತ ಪ್ರಕ್ರಿಯೆ ಪ್ರಾರಂಭ ಆಗಿದೆ ಎಂದರು.

ಬಿಜೆಪಿ ಬಳಿ ಬಹುಮತ ಇದ್ದರೆ ಯಾಕೆ ಆತಂಕ ಪಡಬೇಕು. ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ವಿಪ್ ಬಗ್ಗೆಯೇ ಗೊಂದಲ ಇದೆ. ಇದರ ನಿವಾರಣೆ ಆಗಬೇಕು. ಸರ್ಕಾರಕ್ಕೆ ಬಹುಮತ ಇದೆ. ಮತ್ತೆ ಬಹುಮತ ಸಾಬೀತು ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.