ರಾಜ್ಯಸಭೆಗೆ ಹೆಗ್ಗಡೆ ನಾಮ ನಿರ್ದೇಶನ : ಪೇಜಾವರ ಶ್ರೀ ಸಂತಸ – Vishwanews24
ರಾಜ್ಯಸಭೆಗೆ ಹೆಗ್ಗಡೆ ನಾಮ ನಿರ್ದೇಶನ : ಪೇಜಾವರ ಶ್ರೀ ಸಂತಸ
ಭಾರತ ಸರ್ಕಾರವು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ಡಾ ಡಿ ವೀರೇಂದ್ರ ಹೆಗ್ಗಡೆಯವರನ್ಬು ರಾಜ್ಯಸಭೆ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿರುವುದಕ್ಕೆ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತುಂಬು ಸಂತಸ ವ್ಯಕ್ತಪಡಿಸಿದ್ದಾರೆ .
ಶ್ರೀ ಕ್ಷೇತ್ರದ ಮೂಲಕ ರಾಷ್ಟ್ರದ ಏಳಿಗೆಗೆ ಬಹುಮುಖಿ ಹಾಗೂ ಅತ್ಯಂತ ಪರಿಣಾಮಕಾರಿಯಾದ ಕೊಡುಗೆ ಮತ್ತು ಕೈಂಕರ್ಯಗಳನ್ನು ನಿರ್ವಹಿಸುತ್ತಿರುವ ಹೆಗ್ಗಡೆಯವರ ನಿಯುಕ್ತಿಯಿಂದ ರಾಜ್ಯಸಭೆಯ ಘನತೆ ನೂರ್ಮಡಿಸಿದಂತಾಗಿದೆ . ನಾವು ಮಾತ್ರವಲ್ಲ ; ಇಡೀ ನಾಡೇ ಈ ಆಯ್ಕೆಯಿಂದ ಸಂತಸಪಡುವಂತಾಗಿದೆ .
ಶ್ರೀಯುತ ಹೆಗ್ಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು .ಅವರಿಗೆ ಶ್ರೀಕೃಷ್ಣನ ಪೂರ್ಣಾನುಗ್ರವನ್ನು ಪ್ರಾರ್ಥಿಸುತ್ತೇವೆ . ಎಂದು ಶ್ರೀಗಳು ಸಂದೇಶ ನೀಡಿದ್ದಾರೆ .
ಆದಾಯಕ್ಕಿಂತ ಶೇ.2031ರಷ್ಟು ಹೆಚ್ಚು ಜಮೀರ್ ಅಕ್ರಮ ಆಸ್ತಿ..! Vishwanews24
