ರಾಜ್ಯಸಭೆ ಸ್ಥಾನದಿಂದ ನನ್ನ ಮೋದಿ ಅವರ ಸಂಬಂಧ ಮುಕ್ತಾಯ ಆಗೋದಿಲ್ಲ : ಹೆಚ್.ಡಿ ದೇವೇಗೌಡ – vishwanews24
ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ : ಹೆಚ್ಡಿಡಿ
ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನದಿಂದ ನನ್ನ, ಮೋದಿ ಅವರ ಸಂಬಂಧ ಮುಕ್ತಾಯ ಆಗೋದಿಲ್ಲ. ನನ್ನ ಅಂತಿಮ ಕಾಲದವರೆಗೂ ನನ್ನ ಮೋದಿ ಅವರು ಸಂಬಂಧ ಇರುತ್ತದೆ. ಎನ್ಡಿಎ ಜೊತೆ ನಾವು ಮುಂದುವರೆಯುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.
ದೇವೇಗೌಡರಿಗೆ ಬಿಜೆಪಿ ರಾಜ್ಯಸಭೆ ಸೀಟು ಕೊಡದ್ದಕ್ಕೆ ಕಾಂಗ್ರೆಸ್ ಟೀಕೆ ಮಾಡುತ್ತಿರುವ ಹಿನ್ನೆಲೆ ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನನಗೆ ರಾಜ್ಯಸಭೆ ಸದಸ್ಯನಾಗಿ ಮುಂದುವರೆಯಬೇಕಾಗಿದ್ರೆ ದೆಹಲಿಯಲ್ಲಿ ಬಿಜೆಪಿ ಕೇಂದ್ರದ ನಾಯಕರನ್ನ ಭೇಟಿಯಾಗಿ ಮಾತಾಡುತ್ತಿದ್ದೆ. ಆದರೆ ನಾನು ಯಾವತ್ತೂ ಕೇಂದ್ರದ ನಾಯಕರ ಜೊತೆ ಈ ವಿಚಾರವಾಗಿ ಮಾತೇ ಆಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ – vishwanews24
10 ವರ್ಷಗಳಿಂದ ವೈಯಕ್ತಿಕವಾಗಿ ನನ್ನ ಮತ್ತು ಮೋದಿ ಸಂಬಂಧವಿದೆ. ಒಂದು ರಾಜ್ಯಸಭೆ ಸ್ಥಾನಕೋಸ್ಕರ ಆ ಸಂಬಂಧ ಕಡಿದುಕೊಳ್ಳಲ್ಲ. ವಿದೇಶಿದಲ್ಲಿ ನಾಯಕ ಅಂತ ಮೋದಿ ಅವರನ್ನು ಗುರುತಿಸಿದ್ದಾರೆ. ಮೋದಿಗೆ ಹೊರ ದೇಶದಲ್ಲಿ ಎತ್ತರದ ಸ್ಥಾನ ಇದೆ. ಆ ರೀತಿ ಬೆಳೆದ ವ್ಯಕ್ತಿ ಯಾರೂ ಇಲ್ಲ. ವೈಯಕ್ತಿಕವಾಗಿ ಮೋದಿ ಜೊತೆ ಸಂಬಂಧ ಇದೆ. ನಾನು ರಾಜ್ಯಸಭೆ ಸದಸ್ಯ ಆಗದೇ ಇದ್ದರು ಆ ಸಂಬಂಧ ಇರುತ್ತದೆ. ರಾಜ್ಯದ ಯಾವುದೇ ಸಮಸ್ಯೆ ಆದರೂ ನಾನು ಮೋದಿಯವರನ್ನ ಭೇಟಿ ಆಗುತ್ತೇನೆ. ಪತ್ರ ಬರೆಯುತ್ತೇನೆ. ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಒಂದು ರಾಜ್ಯಸಭೆ ಸ್ಥಾನದಿಂದ ನನ್ನ ಮೋದಿ ಸಂಬಂಧ ಕಡಿದು ಹೋಗುತ್ತದೆ ಅಂತ ದೇಶದ, ರಾಜ್ಯದ ಜನರು ಅಂದುಕೊಳ್ಳಬಾರದು. ಹೀಗಾಗಿ ನಾನು ಸ್ಪಷ್ಟಪಡಿಸುತ್ತಿದ್ದೇನೆ. ನಾವು ಎನ್ಡಿಎ ಜೊತೆಗೆ ಇರುತ್ತೇವೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಕೇಂದ್ರ ಸಚಿವರಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟೀಕರಣ ಕೊಟ್ಟು ಕಾಂಗ್ರೆಸ್ಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ:
ಪಕ್ಷಕ್ಕಾಗಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಸ್ಥಾನ ಇಲ್ಲ ಅಂತ ನಾನು ಕೂತುಕೊಳ್ಳಲ್ಲ. ಪಕ್ಷದ ಬೆಳವಣಿಗೆಗೆ ಎಷ್ಟು ಶಕ್ತಿ ಇದೆಯೋ ಮಾಡುತ್ತೇನೆ. ಪಾರ್ಲಿಮೆಂಟ್ಗೂ ವೀಲ್ ಚೇರ್ನಲ್ಲಿ ಹೋಗುತ್ತಿದ್ದೆ. ರಾಜ್ಯ, ದೇಶದ ವಿಚಾರ ಬಂದಾಗ ನಿರ್ಭಯವಾಗಿ ಮಾತಾಡಿದ್ದೇನೆ. ಎನ್ಡಿಎಯಲ್ಲಿ ಇದ್ದೇವೆ, ಆದರೂ ಪಕ್ಷ ಸಂಘಟನೆ ಆಗಬೇಕು. ಜಿಬಿಎ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಕಚೇರಿಗೆ ಬರುತ್ತೇನೆ. ಶೃಂಗೇರಿ ಶಾರದಾಂಬೆ ಜ್ಞಾನಪಕ ಶಕ್ತಿ ಕೊಟ್ಟಿದ್ದಾಳೆ. ಎಲ್ಲಿ ನಮ್ಮ ಪ್ರವೇಶ ಅಗತ್ಯ ಇದೆಯೋ ಅಲ್ಲಿ ಇರುತ್ತೇನೆ. ರಾಜ್ಯದ, ದೇಶದ ಒಳ್ಳೆಯದಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
