ರಾತ್ರಿ ಕರ್ಫ್ಯೂ : ಕಲಾವಿದರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಿ : ಜಿಲ್ಲಾಧಿಕಾರಿಗೆ ಮನವಿ -Vishwanews24

Featured, ಉಡುಪಿ

ರಾತ್ರಿ ಕರ್ಫ್ಯೂ : ಸಂಗೀತ ಕಾರ್ಯಕ್ರಮಗಳು ರದ್ದಾಗಿ  ಕುಟುಂಬ ನಿರ್ವಹಣೆ ಕಷ್ಟ..

ಕಲಾವಿದರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಿ: ಜಿಲ್ಲಾಧಿಕಾರಿಗೆ ಮನವಿ -Vishwanews24

ಉಡುಪಿ: ಉಡುಪಿಯ ಕರಾವಳಿ ಸಂಗೀತ ಕಲಾವಿದರ ಒಕ್ಕೂಟವು ರಾತ್ರಿ ಕರ್ಫ್ಯೂನಿಂದಾಗಿ ಕಲಾವಿದರಿಗೆ ಆಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಿತು. ಆರ್ಕೆಸ್ಟ್ರಾ ಕಲಾವಿದರಿಗೆ  ರಾತ್ರಿ ಕಾರ್ಯಕ್ರಮ ಮುಗಿಸಿ ಬರುವಾಗ ಆಗುತ್ತಿರುವ ತೊಂದರೆಗಳು  ಹಾಗೂ ರಾತ್ರಿ ಕರ್ಫ್ಯೂನಿಂದಾಗಿ ವಹಿಸಿಕೊಂಡ ಸಂಗೀತ ಕಾರ್ಯಕ್ರಮಗಳು ರದ್ದಾಗಿ  ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ಕೊರೊನಾದಿಂದಾಗಿ  ಅದೆಷ್ಟೋ ಪೂರ್ವ ನಿಗದಿತ ಆರ್ಡರ್ ಗಳು ಕ್ಯಾನ್ಸಲ್ ಆಗಿದ್ದು, ನಾವೆಲ್ಲ ತುಂಬ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಕಳೆದ ವರ್ಷದ ಸೀಸನ್ ಸಮಯದಲ್ಲಿ ಮತ್ತು ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರಿದಿದ್ದು ನಮಗೆಲ್ಲ ತುಂಬ ಆತಂಕ ಉಂಟಾಗಿದೆ. ಇದನ್ನು ಸರಿ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸಂಗೀತ ಕಲಾವಿದರ ಉಡುಪಿ ವಲಯಾಧ್ಯಕ್ಷೆ ಮುಕ್ತಾ  ಶ್ರೀನಿವಾಸ್ ಭಟ್,  ಸಂತೋಷ್ ಪಾನಾ, ಪ್ರಜ್ವಲ್ ಆಚಾರ್ಯ,ಶರತ್ ಉಚ್ಚಿಲ, ವಾಮನ   ಕುಮಾರ್, ಅರುಣ್ , ರೋಹಿತ್  ಮಲ್ಪೆ ಸಹಿತ ಹಲವು ಕಲಾವಿದರು ಉಪಸ್ಥಿತರಿದ್ದರು.

ರಾಜ್ಯಪಾಲರ ಜತೆ ಸಭೆ ಮುಗಿದ ಬಳಿಕ ಖಂಡಿತ ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿಯಾಗಲಿದೆ : ಆರ್. ಅಶೋಕ್ -Vishwanews24